ಬಿಜೆಪಿ ಸರ್ಕಾರಕ್ಕೆ ವರ್ಷ; ರಾಜ್ಯಾದ್ಯಂತ ಜನ ಕಲ್ಯಾಣ ಪರ್ವ

ಕೇಂದ್ರದ ಬಿಜೆಪಿ ಸರ್ಕಾರ ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿಯು ವಿವಿಧೆಡೆ ಜನ ಕಲ್ಯಾಣ ಪರ್ವ ಸಮಾವೇಶ ಏರ್ಪಡಿಸಿದೆ...
ಬಿಜೆಪಿ
ಬಿಜೆಪಿ
Updated on: 

ಬೆಂಗಳೂರು: ಕೇಂದ್ರದ ಬಿಜೆಪಿ ಸರ್ಕಾರ ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿಯು ವಿವಿಧೆಡೆ ಜನ ಕಲ್ಯಾಣ ಪರ್ವ ಸಮಾವೇಶ ಏರ್ಪಡಿಸಿದೆ.

ಜೂ.8ರಂದು ಬೀದರ್, ಕಲಬುರಗಿಯಲ್ಲಿ ಸಮಾವೇಶ ಏರ್ಪಡಿಸಿದ್ದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಂ ಮಾಧವ್ ಪಾಲ್ಗೊಳ್ಳಲಿದ್ದಾರೆ. 10 ರಂದು ಮೈಸೂರಿನಲ್ಲಿ ನಡೆಯುವ ಸಮಾವೇಶದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭಾಗವಹಿಸಲಿದ್ದಾರೆ. ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಜೂ.20ರೊಳಗೆ ಸಮಾವೇಶ ಮಾಡುವಂತೆ ಸೂಚಿಸಲಾಗಿದೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಪಕ್ಷದ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ, ಗದಗ ಜಿಲ್ಲೆ ನರಗುಂದದಲ್ಲಿ ನಿರ್ಮಿಸಿರುವ ಬಿಜೆಪಿ ಹಿರಿಯ ಮುಖಂಡ ದಿವಂಗತ ಜಗನ್ನಾಥ್ ರಾವ್ ಜೋಶಿಯವರ ಸ್ಮಾರಕವನ್ನು ಜೂ.23ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ  ಲೋಕಾರ್ಪಣೆಗೊಳಿಸಲಿದ್ದಾರೆ. ಜೂ.20ರೊಳಗೆ ಮಹಾ ಸಂಪರ್ಕ ಅಭಿಯಾನ ಪೂರ್ಣಗೊಳ್ಳಲಿದ್ದು 80 ಲಕ್ಷ ಸದಸ್ಯರ ಮನೆ ಬಾಗಿಲಿಗೆ ತೆರಳಿ ಅಮಿತ್ ಶಾ ಮತ್ತು ಮೋದಿಯವರ ಅಭಿನಂದನಾ ಪತ್ರ ಕೊಡುತ್ತೇವೆ.

ಜೂ.21ರ ಅಂತಾರಾಷ್ಟ್ರೀಯ ಯೋಗ ದಿನವನ್ನು ಪ್ರತಿ ಮಂಡಲಗಳಲ್ಲಿ ಪಕ್ಷದಿಂದ ಅರ್ಥಪೂರ್ಣವಾಗಿ ಆಚರಿಸಲಾಗುವುದು. ಪ್ರಧಾನಿ ಮೋದಿ  ನೇತೃತ್ವದ ಸರ್ಕಾರದ ಜನಪ್ರಿಯ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸಲು ಸಮಿತಿಗಳನ್ನು ಮಾಡಲಾಗುವುದು. 2016ರೊಳಗೆ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪಕ್ಷಕ್ಕೆ ಸ್ವಂತ ಕಟ್ಟಡಗಳನ್ನು ಹೊಂದಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ದೇಶದ್ರೋಹಿ ನಡವಳಿಕೆ:
ಪಿಎಫ್‍ಐ ಮತ್ತು ಕೆಎಫ್‍ಡಿ ವಿರುದ್ಧ ದಾಖಲಾಗಿದ್ದ 175 ಮೊಕದ್ದಮೆಗಳನ್ನು ವಾಪಸ್ ಪಡೆದಿರುವುದು ಖಂಡನೀಯ. ರಾಜ್ಯ ಸರ್ಕಾರದ್ದು ದೇಶದ್ರೋಹ ನಡವಳಿಕೆ. ಈ ಸಂಘಟನೆಗಳು ಮೈಸೂರಿನಲ್ಲಿ ಹಣಕ್ಕಾಗಿ ವಿದ್ಯಾರ್ಥಿಯನ್ನು ಒತ್ತೆಯಾಳಾಗಿ ಇಟ್ಟುಕೊಂಡು ನಂತರ ಕತ್ತು ಸೀಳಿ ಹತ್ಯೆ ಮಾಡಿದ್ದವು. ಇಂತಹ ಸಂಘಟನೆಗಳ ವಿರುದ್ಧ ಹೂಡಿರುವ ಮೊಕದ್ದಮೆಗಳನ್ನು ವಾಪಸ್  ಪಡೆಯಬಾರದು ಎಂದು ಪ್ರಾಮಾಣಿಕ ಪೊಲೀಸರು ಮನವಿ ಮಾಡಿದ್ದರೂ ಸರ್ಕಾರ ಕೇಳಿಲ್ಲ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com