ಮಂಡ್ಯ : `ಈ ವ್ಯವಸ್ಥೆಯಲ್ಲಿ ಯಾವ ಕೆಲಸ ಮಾಡಲೂ ನನ್ನಿಂದ ಆಗುತ್ತಿಲ್ಲ. ಸಂಪುಟದಿಂದ ನನ್ನ ಕೈಬಿಟ್ಟಿದ್ದರೆ ಎಲ್ಲರಿಗೂ ಕೈ ಮುಗಿಯುತ್ತಿದ್ದೆ' ಎಂದು ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಷ್ ಶನಿವಾರ ಅಳಲು ತೋಡಿಕೊಂಡರು. ನಗರದ ಪಿಇಎಸ್ ಕಾಲೇಜಿನ ಪ್ಲೇಸ್‍ಮೆಂಟ್ ಸಭಾಂಗಣದ ಬಳಿ ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಮನವಿ ಸಲ್ಲಿಸಲು ಬಂದಿದ್ದ ದಲಿತ ಸಂಘಟನೆಗಳ ಮುಖಂಡರ ಬಳಿ ಸಚಿವ ಅಂಬರೀಷ್ ಸಚಿವ ಸ್ಥಾನ ನಿಭಾಯಿಸಲು ಕಷ್ಟವಾಗುತ್ತಿರುವುದನ್ನು ಹೇಳಿಕೊಂಡರು. ಕಬ್ಬಿಗೆ ಸೂಕ್ತ ಬೆಲೆ ಇಲ್ಲ. ಕಬ್ಬು ಅರೆಯಲೂ ಸಾಧ್ಯವಾಗುತ್ತಿಲ್ಲ. ಹೀಗಾಗಿ ರೈತರು ಸಂಕಷ್ಟದಲ್ಲಿದ್ದಾರೆ.