ಮಂಡ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ತಿಂಗಳೊಳಗೆ ಸಂಪುಟ ಪುನರಚನೆ ಮಾಡುತ್ತೇವೆ. ಪುನರಚನೆ ವೇಳೆ ಕೆಲವು ಸಚಿವರನ್ನು ಕೈಬಿಡಲಾಗುವುದು ಎಂದು ಹೇಳಿದ ಮಾರನೆ ದಿನವೇ ವಸತಿ ಸಚಿವ ಅಂಬರೀಷ್ ಅವರು, ಸಂಪುಟ ಪುನರಚನೆ ವೇಳೆ ನನ್ನನ್ನು ಕೈಬಿಟ್ಟರೂ ಸಂತೋಷ. ಸಚಿವನಾಗಿ ಮುಂದುವರೆಸಿದರೂ ಸಂತೋಷ ಎಂದು ಹೇಳುವ ಮೂಲಕ ಸಚಿವ ಸ್ಥಾನ ತ್ಯಜಿಸಲು ಮಾನಸಿಕವಾಗಿ ಸಿದ್ಧರಾಗಿರುವ ಸೂಚನೆ ನೀಡಿದ್ದಾರೆ.