ವಿಧಾನಸಭೆ ಚುನಾವಣೆ: ಕೋಟ್ಯಂತರ ರೂಪಾಯಿ ನಗದು ವಶ

ಕರ್ನಾಟಕ ವಿಧಾನಸಭೆ ಚುನಾವಣೆಗೆ ಮುನ್ನ ಅಪಾರ ಪ್ರಮಾಣದ ನಗದು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಮುನ್ನ ಅಪಾರ ಪ್ರಮಾಣದ ನಗದು, ಮದ್ಯ, ಮಾದಕವಸ್ತು, ಚಿನ್ನ ಮತ್ತು ಬೆಳ್ಳಿಯನ್ನು ರಾಜ್ಯದ ಅಲ್ಲಲ್ಲಿ ವಶಪಡಿಸಿಕೊಳ್ಳಲಾಗಿದೆ.

ಸುಮಾರು 31.55 ಕೋಟಿ ರೂಪಾಯಿ ನಗದು, 4.58 ಕೋಟಿ ರೂಪಾಯಿ ಬೆಲೆಬಾಳುವ 1.15 ಲಕ್ಷ ಲೀಟರ್ ಲಿಕ್ಕರ್, 19.79 ಲಕ್ಷ ರೂಪಾಯಿ ಬೆಲೆಬಾಳುವ 30.52 ಕೆಜಿ ಮಾದಕ ವಸ್ತು /ನಾರ್ಕೊಟಿಕ್ಸ್, 3.59 ಕೋಟಿ ರೂಪಾಯಿ ಬೆಲೆಬಾಳುವ 14.492 ಕೆಜಿ ಚಿನ್ನ ಮತ್ತು 12.67 ಕೋಟಿ ರೂಪಾಯಿ ಬೆಲೆಯ ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿದೆ.

ವಿಚಕ್ಷಣಾ ತಂಡ ಮತ್ತು ಕಣ್ಗಾವಲು ತಂಡಗಳನ್ನು ರಚಿಸಲಾಗಿದ್ದು ರಾಜ್ಯದುದ್ದಕ್ಕೂ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗುತ್ತಿದೆಯೇ ಎಂದು ತಪಾಸಣೆ ಮಾಡಲಾಗುತ್ತಿದೆ.

ಇಂದು ಹೇಳಿಕೆ ಬಿಡುಗಡೆ ಮಾಡಿರುವ ರಾಜ್ಯ ಚುನಾವಣಾ ಆಯೋಗ, ವಶಪಡಿಸಿಕೊಂಡಿರುವ ವಸ್ತುಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ವಾಹನಗಳ ಹ್ಯಾಂಡ್ ಬಿಲ್ ಗಳು, ಸೀರೆಗಳು, ಮಕ್ಕಳ ಬಟ್ಟೆಗಳು ಮತ್ತು ಪಟಾಕಿಗಳಿವೆ. ರಾಜ್ಯದಲ್ಲಿ ಪ್ರಸ್ತುತ 1156 ವಿಚಕ್ಷಣಾ ತಂಡಗಳು ಮತ್ತು 1255 ಸ್ಥಿರ ಕಣ್ಗಾವಲು ತಂಡಗಳು ಸಕ್ರಿಯವಾಗಿವೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com