ರಾಹುಲ್ ಮನಸೆಲ್ಲಾ ಅಧಿಕಾರ ಕೇಂದ್ರಿತ; ವಂದೇ ಮಾತರಂ ಅರ್ಧಕ್ಕೆ ನಿಲ್ಲಿಸಿದ ರಾಹುಲ್ ಕ್ಷಮೆಯಾಚಿಸಬೇಕು: ಬಿಜೆಪಿ

ವಂದೇ ಮಾತರಂ ಅರ್ಧಕ್ಕೆ ನಿಲ್ಲಿಸಿ ಅಗೌರವ ತೋರಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ತೀವ್ರವಾಗಿ ಕಿಡಿಕಾರಿದೆ...
ಕೇಂದ್ರ ಸಚಿವೆ ಸ್ಮೃತಿ ಇರಾನಿ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ
ಕೇಂದ್ರ ಸಚಿವೆ ಸ್ಮೃತಿ ಇರಾನಿ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ
Updated on: 
ಬೆಳಗಾವಿ: ವಂದೇ ಮಾತರಂ ಅರ್ಧಕ್ಕೆ ನಿಲ್ಲಿಸಿ ಅಗೌರವ ತೋರಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ತೀವ್ರವಾಗಿ ಕಿಡಿಕಾರಿದೆ. 
ರಾಹುಲ್ ಗಾಂಧಿಯವರಿಗೆ ಮನಸೆಲ್ಲಾ ಅಧಿಕಾರವೇ ಕೇಂದ್ರಿತ. ದೇಶದ ಶ್ರೀಮಂತ ಇತಿಹಾಸ ಹಾಗೂ ಅದರ ಸೇವೆಯನ್ನು ಅರಿತುಕೊಳ್ಳುವಲ್ಲಿ ರಾಹುಲ್ ವಿಫಲರಾಗಿದ್ದಾರೆ. ಹೀಗಾಗಿಯೇ ಅವರು ವಂದೇ ಮಾತರಂ ಗೀತೆಗೆ ಅಗೌರವ ತೋರಿದ್ದಾರೆಂದು ಕೇಂದ್ರ ಸಚಿವೆ ಸ್ಮೃತಿ ಇರಾನಿಯವರು ಹೇಳಿದ್ದಾರೆ. 
ನಮ್ಮ ಹುತಾತ್ಮ ಯೋಧರ ತ್ಯಾಗವನ್ನು ಅರ್ಥ ಮಾಡಿಕೊಳ್ಳದವರು, ರಾಣಿ ಚೆನ್ನಮ್ಮರಂತಹ ದಿಟ್ಟ ಹೋರಾಟಗಾರ್ತಿ ಬಗ್ಗೆ ತಿಳಿಯದವರು, ತಮ್ಮ ಬಿಡುವಿಲ್ಲದ ಸಮಯದಲ್ಲಿ ತಾಯಿನಾಡಿಗೆ ಗೌರವಾರ್ಪಣೆ ಸಲ್ಲಿಸಲು 2 ನಿಮಿಷ ತೆಗೆದುಕೊಳ್ಳುತ್ತಾರೆಂದು ಹೇಗೆ ನಿರೀಕ್ಷಿಸಲು ಸಾಧ್ಯ?... ಎಂದು ಪ್ರಶ್ನಿಸಿದ್ದಾರೆ. 
ಇದರಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರೂ ಕೂಡ ರಾಹುಲ್ ವಿರುದ್ಧ ಕಿಡಿಕಾರಿದ್ದು, ರಾಹುಲ್ ಗಾಂಧಿಯವರು ದೇಶಕ್ಕೆ ಅಗೌರವವನ್ನು ಸೂಚಿಸಿದ್ದಾರೆ. ಕೂಡಲೇ ಕ್ಷಣೆಯಾಚಿಸಬೇಕೆಂದು ಆಗ್ರಹಿಸಿದ್ದಾರೆ. 
ಕನಿಷ್ಟ ಪಕ್ಷ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಾದರೂ ರಾಹುಲ್ ಗಾಂಧಿಯವರಿಗೆ ಗೀತೆ ಪೂರ್ಣಗೊಳ್ಳಲು ಬಿಡುವಂತೆ ಹೇಳಬಹುದಿತ್ತು. ಅದನ್ನು ಬಿಟ್ಟು, ಇದೀಗ ತಮ್ಮ ಹತಾಶೆಯನ್ನು ಹೊರಹಾಕಲು ಬಿಜೆಪಿ ನಾಯಕರನ್ನು ದೂಷಿಸುತ್ತಿದ್ದಾರೆ. 
ವಂದೇ ಮಾತರಂ ಗೀತೆಗೆ ಅಗೌರವ ಸೂಚಿಸಿದ ರಾಹುಲ್ ಅವರು ಕೂಡಲೇ ಕ್ಷಮೆಯಾಚಿಸಬೇಕು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ತಾವು ಗೆಲ್ಲಲು ಸಾಧ್ಯವಿಲ್ಲ ಎಂಬುದು ಸಿದ್ದರಾಮಯ್ಯ ಅವರಿಗೆ ಮನವರಿಕೆಯಾಗಿದೆ. ಹೀಗಾಗಿಯೇ ಅವರು ಬಾದಾಮಿಗೆ ಹೋಗಿದ್ದಾರೆ. ಆದರೆ, ಅವರು ಅಂದುಕೊಂಡಂತೆ ಆಗುವುದಿಲ್ಲ. ಬಾದಾಮಿಯಲ್ಲಿ ಬಿ ಶ್ರೀರಾಮುಲು ಗೆಲವು ಸಾಧಿಸಲಿದ್ದಾರೆ. ಇನ್ನು 15 ದಿನಗಳಲ್ಲಿ ಸಿದ್ದರಾಮಯ್ಯ ಮನೆಗೆ ಹೋಗುತ್ತಾರೆಂದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com