ಟ್ವಿಟರ್ ನಲ್ಲಿ ನಟಿ ರಮ್ಯಾ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ನಟ ಜಗ್ಗೇಶ್, ರಮ್ಯಾರನ್ನು 'ಕನ್ನಡ ಬಾರದ ಕಾಡುಪಾಪ' ಎಂದು ವ್ಯಂಗ್ಯ ಮಾಡಿದ್ದಾರೆ. "ದೊಡ್ಡವರ ಬಗ್ಗೆ ಮಾತಾಡ ಬೇಕಾದರೆ ಮಾತಾಡುವ ಮಂದಿಗೆ ವಯಸ್ಸು ಅನುಭವ ಸಾಧನೆ ಮಾಡಿ ಪಕ್ವವಾದಾಗ ಅಪಭ್ರಂಷ ಇಲ್ಲದೆ ಚರ್ಚೆ ಮಾಡಿದರೆ ಅದನ್ನ ತರ್ಕ ಎಂದು ಒಪ್ಪಿ ವಿಮರ್ಶೆ ಮಾಡಿ ನಿರ್ಣಯಸುತ್ತಾರೆ ಜನ.. ವಿಶ್ವದ ಬಲಿಷ್ಟರಾಷ್ಠ್ರದ ನಾಯಕರೆ ಪ್ರಧಾನಿ ಮೋದಿ ಅವರನ್ನು ಒಪ್ಪಿ ಮೆಚ್ಚಿದ್ದಾರೆ. ಈಕೆ ಯಾರು? ಸಾಧನೆ ಏನು? ನೆಟ್ಟಗೆ ಕನ್ನಡ ಮಾತಾಡಲು ಬರದ ಕಾಡುಪಾಪದಂತೆ ಈಕೆ! ಎಂದು ಟ್ವೀಟ್ ಮಾಡಿದ್ದಾರೆ.