ಅನಂತ್ ಕುಮಾರ್ ಹೆಗಡೆ ಒಬ್ಬ ಲೋಫರ್, ನೀಚ, ಅಪ್ರಯೋಜಕ: ಆನಂದ ಆಸ್ನೋಟಿಕರ್

ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗಡೆ ಒಬ್ಬ ನೀಚ, ಲೋಫರ್, ಅಪ್ರಯೋಜಕ ಎಂದು ಜೆಡಿಎಸ್ ಮುಖಂಡ ಆನಂದ್ ಆಸ್ನೋಟಿಕರ್...
ಅನಂತ್ ಕುಮಾರ್ ಹೆಗಡೆ ಮತ್ತು ಆನಂದ್ ಆಸ್ನೋಟಿಕರ್
ಅನಂತ್ ಕುಮಾರ್ ಹೆಗಡೆ ಮತ್ತು ಆನಂದ್ ಆಸ್ನೋಟಿಕರ್
ಕಾರವಾರ:  ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗಡೆ ಒಬ್ಬ ನೀಚ, ಲೋಫರ್, ಅಪ್ರಯೋಜಕ ಎಂದು ಜೆಡಿಎಸ್ ಮುಖಂಡ ಆನಂದ್ ಆಸ್ನೋಟಿಕರ್ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. 
ಕಾರವಾರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ಯಾರೋ ಹಾರಿಸಿರುವ ಧ್ವಜವನ್ನು ನಾನು ಹಾರಿಸಿದ್ದೇನೆಂದು ಹೇಳುವ ಮೂಲಕ ತಾವು ಆರ್ ಎಸ್ ಎಸ್ ನಲ್ಲಿ  ದೊಡ್ಡ ಕೆಲಸ ಮಾಡಿದ್ದೇನೆ ಎಂದು ಅನಂತಕುಮಾರ್ ಹೆಗಡೆ ಹೇಳಿಕೊಳ್ಳುತ್ತಾರೆ. ಅದು ಹೇಗೆ ಐದು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೋ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ,
ಹಿಂದೆ ವೈದ್ಯರ ಮೇಲೆಯೂ ಹಲ್ಲೆ ನಡೆಸಿದ್ದು, ಎಲ್ಲರಿಗೂ ಗೊತ್ತಿದೆ. ಒಮ್ಮೆ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಚಪ್ಪಲಿಯಲ್ಲಿಯೇ ಹೊಡೆದಿದ್ದರು. ನಾನು ಕಂಡ ಅತ್ಯಂತ ನೀಚ ಸಂಸದ ಅನಂತಕುಮಾರ್ ಹೆಗಡೆ ಎಂದು ಅಸ್ನೋಟಿಕರ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com