ಯಲ್ಲಾಪುರದ ಶಾಸಕ ಶಿವರಾಮ ಹೆಬ್ಬಾರ ಅವರ ಪತ್ನಿ ಅವರಿಗೆ ವಿಜಯೇಂದ್ರ ಹಾಗೂ ಯಡಿಯೂರಪ್ಪ ಆಪ್ತ ಬಿಜಿ ಪುಟ್ಟಸ್ವಾಮಿ ಅವರು ದೂರವಾಣಿ ಕರೆ ಮಾಡಿ ಸಚಿವ ಸ್ಥಾನ ಹಾಗೂ ಐದು ಕೋಟಿ, ಸಚಿವ ಸ್ಥಾನ ಬೇಡ ಎಂದರೆ 15 ಕೋಟಿ ರುಪಾಯಿ, ಹೆಬ್ಬಾರ ಪುತ್ರನ ವಿರುದ್ಧ ಇರುವ ಗಣಿಗಾರಿಕೆ ಪ್ರಕರಣದಿಂದ ಪಾರು ಮಾಡುವ ಭರವಸೆ ನೀಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಉಗ್ರಪ್ಪ ಆರೋಪಿಸಿದ್ದಾರೆ.