ಅಂತೆಯೇ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಕೂಡ ಶಾಸಕರಿಗೆ ಇಂತಹುದೇ ಮಾತಗಳನ್ನಾಡಿದ್ದು, 'ನಮ್ಮಲ್ಲಿ ಒಡಕು ಮೂಡಿಸಲು ಬಿಜೆಪಿಯವರು ಕೊನೆಕ್ಷಣದವರೆಗೂ ಪ್ರಯತ್ನ ಮುಂದುವರೆಸುತ್ತಾರೆ. ಬಹುಮತ ಸಾಬೀತುಪಡಿಸುವವರೆಗೂ ಎಲ್ಲರೂ ಒಂದೇ ಕಡೆ ಇರಬೇಕಾಗುತ್ತದೆ. ಒಂದೆರಡು ದಿನ ಸ್ವಲ್ಪ ಕಷ್ಟ ಆಗಬಹುದು. ಆದರೆ, ಭವಿಷ್ಯದಲ್ಲಿ ಎಲ್ಲರಿಗೂ ಒಳ್ಳೆಯದೇ ಆಗಲಿದೆ' ಎಂದು ಶಾಸಕರಲ್ಲಿ ಭರವಸೆ ತುಂಬಿದರು.