ಸೋಲು ಎಂದಿಗೂ ಅನಾಥ, ಶಾಂತಾ ಅವರ ಸೋಲಿನ ಹೊಣೆ ನನ್ನದೇ, ಉಪಚುನಾವಣೆಗೆ ಸಹಕಾರ ನೀಡದಿರುವುದಕ್ಕೆ ಸೋತೆ ಎಂದು ಯಾರನ್ನೂ ದೂರುವುದಿಲ್ಲ. ಬಿ.ಎಸ್.ಯಡಿಯೂರಪ್ಪ, ಶಾಸಕರಾದ ಸೋಮಣ್ಣ, ಸಿ.ಟಿ.ರವಿ ಸೇರಿದಂತೆ ಹಲವು ನಾಯಕರು ಪ್ರಚಾರದಲ್ಲಿ ಭಾಗಿಯಾಗಿದ್ದರು. ಆದರೆ ಜಿಲ್ಲೆಯ ಜನರು ನಮ್ಮನ್ನು ತಿರಸ್ಕರಿಸಿದ್ದಾರೆ. ಜನತೆಯ ತೀರ್ಪನ್ನು ಗೌರವಿಸುತ್ತೇವೆ ಎಂದು ಹೇಳಿದ್ದಾರೆ.