ಸಚಿವ ಸ್ಥಾನ ಸಿಗದಿರುವುದಕ್ಕೆ ಹತಾಶರಾಗಿ ರಮೇಶ್ ಜಾರಕಿಹೊಳಿ ಮಾತನಾಡುತ್ತಿದ್ದಾರೆ: ಡಿ.ಕೆ.ಶಿವಕುಮಾರ್

ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ತೀವ್ರ ಒತ್ತಡಕ್ಕೆ ಒಳಗಾಗಿದ್ದು, ಸಚಿವ ಸ್ಥಾನ ಸಿಗದ್ದಕ್ಕೆ ಹತಾಶರಾಗಿ ಮಾತನಾಡುತ್ತಿದ್ದಾರೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಬುಧವಾರ ಹೇಳಿದ್ದಾರೆ.
ಡಿಕೆ.ಶಿವಕುಮಾರ್.
ಡಿಕೆ.ಶಿವಕುಮಾರ್.
Updated on

ಬೆಂಗಳೂರು: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ತೀವ್ರ ಒತ್ತಡಕ್ಕೆ ಒಳಗಾಗಿದ್ದು, ಸಚಿವ ಸ್ಥಾನ ಸಿಗದ್ದಕ್ಕೆ ಹತಾಶರಾಗಿ ಮಾತನಾಡುತ್ತಿದ್ದಾರೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಬುಧವಾರ ಹೇಳಿದ್ದಾರೆ.

ಜಾರಕಿಹೊಳಿ ಹೇಳಿಕೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿ ಪ್ರತಿಕ್ರಿಯೆ ನೀಡಿದ ಅವರು, ರಮೇಶ್ ಜಾರಕಿಹೊಳಿ ಮಾತುಗಳನ್ನು ಕೇಳಿದರೆ ಅಯ್ಯೋ ಎನಿಸುತ್ತದೆ. ರಮೇಶ್ ಜಾರಕಿಹೊಳಿಯವರನ್ನು ಬಿಜೆಪಿ ಆಸ್ಪತ್ರೆಗೆ ಸೇರಿಸಬೇಕು. ಸಿಡಿ ಪ್ರಕರಣ ತನಿಖೆ ಮಾಡಿಸಲು ಜಾರಕಿಹೊಳಿಯವರನ್ನು ಯಾರು ತಡೆದಿದ್ದಾರೆ. ಈ ಬಗ್ಗೆ ನಾನೇನು ಪ್ರತಿಕ್ರಿಯೆ ನೀಡುವುದಿಲ್ಲ. ಅವರು ಯಾವ ತನಿಖೆಯನ್ನು ಬೇಕಾದರೂ ಮಾಡಲಿ ಎಂದು ಹೇಳಿದರು.

ಇನ್ನು ವಿದೇಶದಲ್ಲಿ ಡಿ.ಕೆ.ಶಿವಕುಮಾರ್​ ಫ್ಲ್ಯಾಟ್​​ ಇದೆ ಎಂಬ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ, ಶೇ.10 ಆದರೂ ಬರುವ ಹಾಗೆ ಮಾಡಿ. ನಾನೇ ಹೋಗಿಬರುತ್ತೇನೆ. ಐ ವಿಷ್ ಹಿಮ್ ಆಲ್ ದ ಬೆಸ್ಟ್, ಶುಭವಾಗಲಿ ಯಶಸ್ಸಾಗಲಿ ಎಂದು ಜಾರಕಿಹೊಳಿಗೆ ಟಾಂಗ್ ನೀಡಿದರು.

ಚುನಾವಣೆಯಲ್ಲಿ ಭೇಟಿ ಮಾಡೋಣ ಎಂದಿದ್ದಾರೆ, ಭೇಟಿಯಾಗೋಣ. ಯಾವ ಆಸ್ತಿ, ಯಾವ ಆಡಿಯೋ ಬೇಕಾದರೂ ಮಾಡಿಕೊಳ್ಳಲಿ. ಅವರಲ್ಲಿ ಏನೇನು ಪಟ್ಟುಗಳು, ಆಸನಗಳು ಇದ್ದಾವೆ ತೋರಿಸಲಿ ನೋಡಿಕೋಳ್ತಿವಿ ಎಂದು ತಿರುಗೇಟು ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com