ಮಾರ್ಚ್ 17ಕ್ಕೆ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ: ವಿ ಶ್ರೀನಿವಾಸ್ ಪ್ರಸಾದ್

ಸಿದ್ದರಾಮಯ್ಯ ಬಾವಿಯೊಳಗಿನ ಕಪ್ಪೆ ಇದ್ದಂತೆ. ಪ್ರಧಾನಿ ನರೇಂದ್ರ ಮೋದಿ ಸಮುದ್ರದಲ್ಲಿ ಈಜಿರುವ ನಾಯಕ
ವಿ ಶ್ರೀನಿವಾಸ್ ಪ್ರಸಾದ್(ಸಂಗ್ರಹ ಚಿತ್ರ)
ವಿ ಶ್ರೀನಿವಾಸ್ ಪ್ರಸಾದ್(ಸಂಗ್ರಹ ಚಿತ್ರ)

ಮೈಸೂರು: ಮಾರ್ಚ್ 17ಕ್ಕೆ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸುತ್ತೇನೆ ಎಂದು ಬಿಜೆಪಿ ಸಂಸದ ವಿ ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ.

ಮೈಸೂರಿನಲ್ಲಿಂದು ಮಾತನಾಡಿದ ಅವರು, ಮುಂದಿನ ಚುನಾವಣೆಯಲ್ಲಿ ಬಹಿರಂಗ ಪ್ರಚಾರಕ್ಕೆ ಹೋಗುವುದಿಲ್ಲ. ಆದರೆ ಬಿಜೆಪಿಯನ್ನು‌ ಬೆಂಬಲಿಸಿ ಎಂದು ಎಲ್ಲರನ್ನು ಕೇಳಿಕೊಳ್ಳುತ್ತೇನೆ ಎಂದರು.

ಸಿದ್ದರಾಮಯ್ಯ ಬಾವಿಯೊಳಗಿನ ಕಪ್ಪೆಯಂತೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಬಾವಿಯೊಳಗಿನ ಕಪ್ಪೆ ಇದ್ದಂತೆ. ಪ್ರಧಾನಿ ನರೇಂದ್ರ ಮೋದಿ ಸಮುದ್ರದಲ್ಲಿ ಈಜಿರುವ ನಾಯಕ. ಹೀಗಾಗಿ ಸಿದ್ದರಾಮಯ್ಯ ಅವರನ್ನು ಪ್ರಧಾನಿ ಮೋದಿಗೆ ಹೋಲಿಸಬೇಡಿ ಎಂದರು.

ವಿ ಶ್ರೀನಿವಾಸ್ ಪ್ರಸಾದ್(ಸಂಗ್ರಹ ಚಿತ್ರ)
ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಸರ್ಕಾರಿ ಹುದ್ದೆ ತೊರೆದ ಶ್ರೀನಿವಾಸ್ ಪ್ರಸಾದ್ ಅಳಿಯ ಡಾ. ಮೋಹನ್!

ಸಿದ್ದರಾಮಯ್ಯ ಬಾಯಿಗೆ ಬಂದಂತೆ ಮಾತಾಡುವುದನ್ನು ಕಲಿತಿದ್ದಾನೆ. ಸಿದ್ದರಾಮಯ್ಯಗೂ ಸಚಿವ ಜಮೀರ್​ ಅಹ್ಮದ್ ಖಾನ್​ಗೆ ಏನು ವ್ಯತ್ಯಾಸ ಇದೆ ಹೇಳಿ? ಇಬ್ಬರು ಕೂಡಾ ಸುಮ್ಮನೆ ಕೂಗಾಡುತ್ತಾರೆ ಎಂದರು.

ಒಂದೇ ಮನೆಯಲ್ಲಿ ಇಬ್ಬರು ಆಕಾಂಕ್ಷಿಗಳು: ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್​ಗಾಗಿ ಶ್ರೀನಿವಾಸ್ ಪ್ರಸಾದ್ ಅವರ ಅಳಿಯ ಡಾ.ಮೋಹನ್ ಅವರು ಆಕಾಂಕ್ಷಿಯಾಗಿದ್ದರು. ಇದೀಗ ಹರ್ಷವರ್ಧನ್ ಕೂಡ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ. ಈ ಬಗ್ಗೆ ಮಾತನಾಡಿದ ಶ್ರೀನಿವಾಸ್ ಪ್ರಸಾದ್, ನನಗೆ ನನ್ನ ಅಳಿಯ ಡಾ.ಮೋಹನ್ ಆಕಾಂಕ್ಷಿ ಎನ್ನುವುದು ಗೊತ್ತಿತ್ತು. ಈಗ ಹರ್ಷವರ್ಧನ್ ಆಕಾಂಕ್ಷಿ ಎಂಬುದು ಗೊತ್ತಾಗಿದೆ. ಈಗ ನಮ್ಮ ಮನೆಯಲ್ಲಿ ಇಬ್ಬರು ಆಕಾಂಕ್ಷಿಗಳಿದ್ದಾರೆ ಎಂದರು.

ಮೋಹನ್ ಹಾಗೂ ಹರ್ಷವರ್ಧನ್ ತುಂಬಾ ಅನ್ಯೋನ್ಯವಾಗಿದ್ದಾರೆ. ಯಾರಿಗೆ ಟಿಕೆಟ್ ಕೊಟ್ಟರೂ ಹೊಂದಾಣಿಕೆಯಿಂದ ಕೆಲಸ ಮಾಡುತ್ತಾರೆ ಎಂದರು.

ವಿ ಶ್ರೀನಿವಾಸ್ ಪ್ರಸಾದ್(ಸಂಗ್ರಹ ಚಿತ್ರ)
ಸಿದ್ದರಾಮಯ್ಯ ಮಾನಸಿಕ ರೋಗಿ; ದಡ್ಡ, ಬಾಯಿಗೆ ಬಂದಂತೆ ಮಾತನಾಡುತ್ತಾನೆ: ಶ್ರೀನಿವಾಸ್ ಪ್ರಸಾದ್ ವಾಗ್ದಾಳಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com