R.Ashok
ವಿಪಕ್ಷ ನಾಯಕ ಆರ್.ಅಶೋಕ್

ರಾಹುಲ್ ಗಾಂಧಿ ಅದೇನು ಬಾಂಬ್ ಹಾಕ್ತಾರೋ ಹಾಕಲಿ ನೋಡೋಣ: ಆರ್.ಅಶೋಕ್ ವ್ಯಂಗ್ಯ

ಮತಕಳ್ಳತನದ ಬಗ್ಗೆ ಆರೋಪ ಮಾಡುತ್ತಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬಳಿ ಅಂತಹ ಪ್ರಮುಖ ದಾಖಲೆಗಳಿದ್ದರೆ, ಜನರ ಮುಂದೆ ಬರುವ ಬದಲು ನ್ಯಾಯಾಲಯವನ್ನು ಸಂಪರ್ಕಿಸಬೇಕಿತ್ತು.
Published on

ಮೈಸೂರು: ಮತ ಕಳ್ಳತನದ ಬಗ್ಗೆ ಆರೋಪ ಹೊರಿಸಿ ತಮ್ಮ ಬಳಿ ಪುರಾವೆಗಳಿವೆ ಎಂದು ಹೇಳಿಕೊಳ್ಳುತ್ತಿರುವ ಕಾಂಗ್ರೆಸ್ ಬಳಿ ಯಾವುದೇ ದಾಖಲೆಗಳಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಸೋಮವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತಕಳ್ಳತನದ ಬಗ್ಗೆ ಆರೋಪ ಮಾಡುತ್ತಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬಳಿ ಅಂತಹ ಪ್ರಮುಖ ದಾಖಲೆಗಳಿದ್ದರೆ, ಜನರ ಮುಂದೆ ಬರುವ ಬದಲು ನ್ಯಾಯಾಲಯವನ್ನು ಸಂಪರ್ಕಿಸಬೇಕಿತ್ತು ಎಂದು ಹೇಳಿದ್ದಾರೆ.

2023 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 136 ಸ್ಥಾನಗಳನ್ನು ಗೆದ್ದಾಗ ಮತದಾರರ ಪಟ್ಟಿ ಮತ್ತು ಚುನಾವಣಾ ಆಯೋಗ ಸರಿಯಾಗಿತ್ತು, ಆದರೆ, ಸಂಸತ್ತಿನ ಚುನಾವಣೆಯಲ್ಲಿ ಕೇವಲ ಒಂಬತ್ತು ಸ್ಥಾನಗಳನ್ನು ಗೆಲ್ಲಲು ಸಾಧ್ಯವಾದಾಗ ಇವಿಎಂಗಳು ಮತ್ತು ಚುನಾವಣಾ ಆಯೋಗದ ಮೇಲೆ ಆರೋಪ ಮಾಡುತ್ತಿದ್ದಾರೆ.

ಸಂಸತ್ ಚುನಾವಣೆ ನಡೆದಾಗ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಎಲ್ಲಾ ರಾಜಕೀಯ ಪಕ್ಷದ ಏಜೆಂಟ್‌ಗಳಿಗೆ ಮತದಾರರ ಪಟ್ಟಿಯ ಕರಡನ್ನು ವಿತರಿಸಲಾಯಿತು. ನಂತರ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಲಾಯಿತು.

ರಾಹುಲ್ ಗಾಂಧಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಿ, ಅವರ ಬಳಿಯಿರುವ ಯಾವುದೇ ಪರಮಾಣು ಬಾಂಬ್, ಕ್ಷಿಪಣಿ ಅಥವಾ ಮೆಷಿನ್ ಗನ್ ಅನ್ನು ಬೀಳಿಸಲಿ.ಸಮಸ್ಯೆಯಿಲ್ಲ ಎಂದು ತಿಳಿಸಿದರು.

R.Ashok
'ಗ್ಯಾರಂಟಿ' ಗಳಿಗಾಗಿ ಪರಿಶಿಷ್ಟರ 11.8 ಸಾವಿರ ಕೋಟಿ ರೂ ಅನುದಾನ ದೋಚಲು ಕಾಂಗ್ರೆಸ್ ಮುಂದು: ಅಶೋಕ್

ಎರಡು ವರ್ಷ ಎಲ್ಲೋ ಇದ್ದ ರಾಹುಲ್ ಗಾಂಧಿ, ಈಗ ಚುನಾವಣೆಗೋಸ್ಕರ ಕರ್ನಾಟಕಕ್ಕೆ ಬಂದಿದ್ದಾರೆ. 2 ಸಾವಿರ ರೈತ ಆತ್ಮಹತ್ಯೆ, ಗರ್ಭಿಣಿಯರ ಸಾವು, ಮೈಕ್ರೋ ಫೈನಾನ್ಸ್‌ನಿಂದ ಸಾವುಗಳಾದವು ಆಗೇಕೆ ಬರಲಿಲ್ಲ? ಎಂದು ಪ್ರಶ್ನಿಸಿದರು.

ಇದೇ ವೇಳೆ ಕಾಂಗ್ರೆಸ್‌ನ ಚುನಾವಣಾ ಅಕ್ರಮಗಳ ಹೋರಾಟವನ್ನು ಭೂತದ ಕೈಯಲ್ಲಿ ಭಗವದ್ಗೀತೆಗೆ ಹೋಲಿಸಿದರು.

ಬಳಿಕ ಕನಕಪುರ ಚುನಾವಣೆಯಲ್ಲಿ ಅಕ್ರಮವಾಗಿದೆ ಎಂಬ ಕಾಂಗ್ರೆಸ್‌ನ ಆರೋಪಗಳನ್ನು ತಳ್ಳಿಹಾಕಿದರು ಅವರು, ನಾಳೆ ವಿಧಾನಸೌಧದ ಮುಂದೆ ಕಾಂಗ್ರೆಸ್ ವಿರುದ್ಧ ಹೋರಾಟ ಮಾಡುತ್ತೇವೆಂದು ಹೇಳಿದರು.

ಮಹದೇವಪ್ಪ ಹೇಳಿಕೆ ಹಾಸ್ಯಾಸ್ಪದ

ಇದೇ ವೇಳೆ ಕೆಆರ್‌ಎಸ್ ಅಣೆಕಟ್ಟಿಗೆ ಟಿಪ್ಪು ಸುಲ್ತಾನ್ ಅಡಿಗಲ್ಲು ಹಾಕಿದರು ಎಂದ ಸಚಿವ ಮಹದೇವಪ್ಪ ಅವರ ಹೇಳಿಕೆ ಕುರಿತು ಅಶೋಕ್ ಅವರು ತೀವ್ರವಾಗಿ ಕಿಡಿಕಾರಿದರು.

ಶ್ರೀರಂಗಪಟ್ಟಣ ತಾಲ್ಲೂಕಿನ ಕೃಷ್ಣರಾಜ ಸಾಗರಕ್ಕೆ ‘ಟಿಪ್ಪುಸುಲ್ತಾನ್‌ ಸಾಗರ’ ಎಂದು ಮರುನಾಮಕರಣ ಮಾಡಲು ಕಾಂಗ್ರೆಸ್‌ ಹುನ್ನಾರ ನಡೆಸುತ್ತಿದೆ. ಇದಕ್ಕೆ ಸಚಿವ ಎಚ್‌.ಸಿ. ಮಹದೇವಪ್ಪ ಅವರು ಪೀಠಿಕೆ ಹಾಕಿದ್ದಾರೆಂದು ಹೇಳಿದ್ದಾರೆ.

‘ಟಿಪ್ಪು ಸುಲ್ತಾನ್ 1799ರಲ್ಲಿ ಮೃತಪಟ್ಟಿದ್ದಾರೆ. ಕೆಆರ್‌ಎಸ್ ಜಲಾಶಯದ ನಿರ್ಮಾಣ 1911ರಲ್ಲಿ ಆರಂಭವಾಗಿದೆ. ಬರೋಬ್ಬರಿ 112 ವರ್ಷಗಳ ನಂತರ ಡ್ಯಾಂ ಕಟ್ಟಲಾಗಿದೆ. ಟಿಪ್ಪು ಶಂಕುಸ್ಥಾಪನೆ ಮಾಡಿದ್ದರೆ ಆಗಲೇ ಈ ಹೆಸರು ಇಡಬೇಕಿತ್ತಲ್ವ? ನಾಪತ್ತೆಯಾಗಿದ್ದ ಕಲ್ಲು 112 ವರ್ಷ ನಂತರ ಪ್ರತ್ಯಕ್ಷವಾಗಿದ್ದು ಹೇಗೆ? ಈ ಶಿಲಾನ್ಯಾಸ ಫಲಕದ ಮೇಲೆ ಅನುಮಾನವಿದ್ದು, ಈ ಬಗ್ಗೆ ಪರಾಮರ್ಶೆ ನಡೆಯಬೇಕು ಎಂದು ಆಗ್ರಹಿಸಿದರು.

R.Ashok
KRS​ಗೆ ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್‌: ಅಡಿಗಲ್ಲಿನಲ್ಲೇ ಸಾಕ್ಷಿಯಿದೆ; ಹೇಳಿಕೆ ಸಮರ್ಥಿಸಿಕೊಂಡ HC ಮಹದೇವಪ್ಪ

ಕೃಷ್ಣರಾಜಸಾಗರ ಡ್ಯಾಂಗೆ ಟಿಪ್ಪು ಹೆಸರು ತಳಕು ಹಾಕುತ್ತಿರುವುದು ನಾಲ್ವಡಿ ಕೃಷ್ಣರಾಜ ಒಡೆಯರ್‌ಗೆ ಮಾಡಿದ ಅಪಮಾನ. ಟಿಪ್ಪು ಸುಲ್ತಾನ್‌ ಒಬ್ಬ ನಾಡದ್ರೋಹಿ, ಪರ್ಷಿಯಾ ಮೂಲದವನು. ಈತ ಸಾವಿರಾರು ಹಿಂದೂಗಳನ್ನು ಕೊಂದು, ದೇವಾಲಯಗಳನ್ನು ಕೆಡವಿರುವ ಬಗ್ಗೆ ಇತಿಹಾಸದಲ್ಲಿ ದಾಖಲೆ ಇದೆ. ಇಂಥ ಮತಾಂಧನ ಹೆಸರನ್ನು ಕೆಆರ್‌ಎಸ್‌ಗೆ ಇಡಲು ಹೊರಟಿರುವುದು ಕಾಂಗ್ರೆಸ್‌ ಮನಸ್ಥಿತಿಯನ್ನು ತೋರಿಸಿದೆ ಎಂದು ಕಿಡಿಕಾರಿದರು.

ರಾಜಮನೆತನದ ಆಭರಣಗಳನ್ನು ಮಾರಾಟ ಮಾಡುವ ಮೂಲಕ ವೈಯಕ್ತಿಕವಾಗಿ ಹಣಕಾಸು ಒದಗಿಸಿದ ದಾರ್ಶನಿಕ ರಾಜ ನಾಲ್ವಡಿ ಕೃಷ್ಣರಾಜ ಒಡೆಯರ್. ಅವರ ಗೌರವಾರ್ಥವಾಗಿ ಈ ಅಣೆಕಟ್ಟಿಗೆ ಕೃಷ್ಣರಾಜ ಸಾಗರ ಎಂದು ಹೆಸರಿಸಲಾಗಿದೆ. ಮಹದೇವಪ್ಪ ಅವರ ಹೇಳಿಕೆ ಹಾಸ್ಯಾಸ್ಪದ ಹಾಗೂ ಸುಳ್ಳಿನಿಂದ ಕೂಡಿದೆ. ಅವರ ಹೇಳಿಕೆ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಮೈಸೂರು ರಾಜಮನೆತನದ ಪರಂಪರೆಗೆ ಮಾಡಿದ ಅವಮಾನವೂ ಆಗಿದೆ.

‘ಕಾಂಗ್ರೆಸ್‌ ನಾಯಕರು ಪದೇ ಪದೇ ನಾಲ್ವಡಿ ಕೃಷ್ಣರಾಜ ಒಡೆಯರ್‌ ಹೆಸರನ್ನು ಮುಂಚೂಣಿಗೆ ತರುತ್ತಿದ್ದಾರೆ. ಕೆಲ ದಿನಗಳ ಹಿಂದೆ ಯತೀಂದ್ರ ಅವರು ‘ಮೈಸೂರಿಗೆ ನಾಲ್ವಡಿ ಅವರಿಗಿಂತ ಸಿದ್ದರಾಮಯ್ಯನವರ ಕೊಡುಗೆ ಹೆಚ್ಚು’ ಎಂದು ಹೇಳಿಕೆ ನೀಡಿದ್ದರು. ಕೆಆರ್‌ಎಸ್ ಜಲಾಶಯ ನಿರ್ಮಾಣಕ್ಕೆ ನಾಲ್ವಡಿ ಅವರು ಯಾರ ಮೇಲೂ ತೆರಿಗೆ ಹಾಕಿರಲಿಲ್ಲ. ಆದರೆ, ಸಿದ್ದರಾಮಯ್ಯ ಸರ್ಕಾರ ಎರಡು ವರ್ಷದಲ್ಲಿ ರೂ,2 ಲಕ್ಷ ಕೋಟಿ ಸಾಲ ಮಾಡಿ, ಜನರ ಮೇಲೆ ತೆರಿಗೆಯ ಬರೆ ಎಳೆದಿದೆ. ಇಂಥ ಮುಖ್ಯಮಂತ್ರಿಯನ್ನು ನಾಲ್ವಡಿ ಅವರಿಗೆ ಹೋಲಿಕೆ ಮಾಡುವುದು ನಾಚಿಕೆಗೇಡು’ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಗೌರವ ಉಳಿಯಬೇಕಾದ್ರೆ ಕೂಡಲೇ ರಾಜ್ಯದ ಜನತೆ, ಒಡೆಯರ್‌ ಕುಟುಂಬದ ಕ್ಷಮಾಪಣೆ ಕೇಳಿ. ಹೀಗೆ ಮಾತನಾಡಿದ್ರೆ ಜನರು ನಿಮ್ಮ ಪಕ್ಷವನ್ನು ಧೂಳೀಪಟ ಮಾಡುತ್ತಾರೆ ಎಂದು ಎಚ್ಚರಿಕೆ ನೀಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com