ಮಂಗಳನಲ್ಲಿ ನದಿ!

ಮಂಗಳನಲ್ಲಿ ನದಿ!
Updated on: 

ಇಂಥ ಪ್ರಶ್ನೆಗಳಿಗೆ ಉತ್ತರ ನೀಡುವ ಯತ್ನವನ್ನು ಐರೋಪ್ಯ ಬಾಹ್ಯಾಕಾಶ ಸಂಸ್ಥೆ ಮಾಡಿದೆ. ಇತ್ತೀಚೆಗಷ್ಟೇ ಮಂಗಳನ ಕೆಲ ಫೋಟೋಗಳನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ನದಿ ಹರಿದುಹೋಗಿರುವ ಗುರುತನ್ನು ಪತ್ತೆ ಹಚ್ಚಲಾಗಿದೆ. ನದಿ ಮಂಗಳನ ನೆಲದುದ್ದುಕ್ಕೂ ಹರಿದು ಹೋಗಿರುವ ಗುರುತಿದ್ದು, ಇದರಿಂದ ಮುಂದಿನ ಸಂಶೋಧನೆಗೆ ಇನ್ನಷ್ಟು ಸಹಾಯವಾಗಬಹುದು ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ.
ಈ ನದಿ ಸುಮಾರು 4 ಮೈಲಿ (7 ಕಿ.ಮೀ.) ಅಗಲ, 900 (1500 ಕಿ.ಮೀ) ಮೈಲಿ ಉದ್ದವಿದೆ. ಅಲ್ಲದೆ 1,000 ಅಡಿ ಆಳ ಇದ್ದಿರಬಹುದು ಎಂದು ಹೇಳಲಾಗುತ್ತಿದೆ. 'ಈ ಚಿತ್ರ ನೋಡಿದರೆ ಭಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿತ್ತು ಎಂಬುದಾಗಿ ಊಹಿಸಬಹುದು' ಎಂದು ವಿಜ್ಞಾನಿಗಳು ಹೇಳುತ್ತಾರೆ.
ತನ್ಮಧ್ಯೆ, ಮಂಗಳನ ಮೇಲೆ ಸಂಶೋಧನೆ ನಡೆಸುತ್ತಿರುವ ನಾಸಾದ ಕ್ಯೂರಿಯಾಸಿಟಿ ನೌಕೆ ತನ್ನ ಅಧ್ಯಯನ ಮುಂದುವರಿಸಿದ್ದು, ಬಂಡೆಗಳನ್ನು ಕೊರೆಯುವ ಕೆಲಸ ಆರಂಭಿಸಿದೆ. ಇತ್ತೀಚೆಗಷ್ಟೇ ಹೂವಿನಂಥ ರಚನೆಗಳುಳ್ಳ ಚಿತ್ರ ಕಳಿಸಿ ಈ ನೌಕೆ ಸುದ್ದಿಯಲ್ಲಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com