

ನ್ಯೂಯಾರ್ಕ್: ಗೂಗಲ್ ನ್ಯೂಸ್ ಸೈಟ್‌ಗಳಿಗಿಂತ ಫೇಸ್‌ಬುಕ್‌ನಲ್ಲೇ ಸುದ್ದಿ ತಿಳಿದುಕೊಳ್ಳುವವರ ಸಂಖ್ಯೆ ಜಾಸ್ತಿಯಿದೆಯಂತೆ.
ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ಶೇರ್ ಮಾಡಲ್ಪಟ್ಟ ಲಿಂಕ್‌ಗಳಿಂದಲೇ ಜನರು ಸುದ್ದಿಗಳನ್ನು ತಿಳಿದುಕೊಳ್ಳುತ್ತಾರೆ ಎಂದು Parse.Ly ವಿಶ್ಲೇಷಣಾ ಸಂಸ್ಥೆ ಹೇಳಿದೆ.
ಶೇ. 43ರಷ್ಟು ಜನರು ಸಾಮಾಜಿಕ ತಾಣಗಳ ಮೂಲಕ ಸುದ್ದಿ ತಿಳಿದುಕೊಳ್ಳುವವರಾಗಿದ್ದು, ಶೇ. 38 ರಷ್ಟು ಜನರು ಗೂಗಲ್ ಸುದ್ದಿತಾಣದ ಮೂಲಕ ಸುದ್ದಿ ತಿಳಿದುಕೊಳ್ಳುತ್ತಾರೆ ಎಂದು Parse.Ly. ಸಂಸ್ಥೆಯ ಚೀಫ್ ಟೆಕ್ನಿಕಲ್ ಆಫೀಸರ್ ಆ್ಯಂಡ್ರೂ ಮೊಂಟಾಲಿನಿ ಹೇಳಿಕೆಯನ್ನು ಫಾರ್ಚ್ಯೂನ್ ಮ್ಯಾಗಜಿನ್ ಉಲ್ಲೇಖಿಸಿದೆ.