

ಫೇಸ್‌ಬುಕ್ ನಂತರ ಅತಿ ಹೆಚ್ಚು ಪ್ರಸಿದ್ಧಿ ಪಡೆದಿರುವ ವಾಟ್ಸಾಪ್ ಇದೀಗ ಜನರಿಗೆ ಇನ್ನಷ್ಟು ಹತ್ತಿರವಾಗುತ್ತಿದೆ. ಸ್ಮಾರ್ಟ್‌ಫೋನ್ ಬಳಸುವ ಗ್ರಾಹಕರು ಇಂಟರ್‌ನೆಟ್ ಬಳಸುವ ಮೂಲಕ ವಾಟ್ಸಾಪ್‌ನಲ್ಲಿ ಮೆಸ್ಸೇಜ್ ಮತ್ತು ಫೋಟೋಗಳನ್ನು ಕಳಿಸುವ ಸೇವೆ ಇತ್ತು.
ವಾಟ್ಸಾಪ್ ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದು, ವಾಟ್ಸಾಪ್ ಬಳಕೆದಾರರಿಗೆ ಉಚಿತ ಕರೆಗಳನ್ನು ಮಾಡುವ ಸೌಲಭ್ಯ ನೀಡಲು ಮುಂದಾಗಿದೆ. ಇದುವರೆಗೂ ಸ್ಕೈಪ್, ಲೈನ್ ಹಾಗೂ ವೈಬರ್ ನಂತಹ ಕೆಲವು ಸಾಫ್ಟ್‌ವೇರ್‌ಗಳು ಮಾತ್ರ ಕರೆಗಳನ್ನು ಮಾಡುವ ಸೌಲಭ್ಯ ನೀಡುತ್ತಿದ್ದವು. ಇದೀಗ ಆ ಸಾಲಿಗೆ ವಾಟ್ಸಾಪ್ ಸೇರ್ಪಡೆಯಾಗಿದೆ.
ಉಚಿತ ಕರೆ ಸೌಲಭ್ಯ ಒದಗಿಸುವುದಾಗಿ ವಾಟ್ಸಾಪ್ ಸಂಸ್ಥೆ ಕಳೆದ ವರ್ಷವೇ ಘೋಷಿಸಿತ್ತು. ಆದರೆ ಈ ಸೌಲಭ್ಯ ಇನ್ನೂ ಪರೀಕ್ಷಾ ಹಂತದಲ್ಲಿದ್ದು ಶೀಘ್ರದಲ್ಲೇ ಬಳಕೆದಾರರಿಗೆ ಬಳಕೆಗೆ ಸಿಗಲಿದೆ.
ವಾಟ್ಸಾಪ್ ಬಳಕೆ ವಿಧಾನ
* ವಾಟ್ಸಾಪ್ ಬಳಕೆ ಮಾಡುವವರಿಗೆಲ್ಲ ಈ ಸೌಲಭ್ಯ ಸಿಗುವುದಿಲ್ಲ. ಮೊದಲು ಈ ಸೌಲಭ್ಯ ಪಡೆದಿರುವವರು ವಾಟ್ಸಾಪ್ ಮೂಲಕ ನಿಮಗೆ ಕರೆ ಮಾಡಬೇಕು. ಈ ನಂತರವೇ ನಿಮಗೆ ವಾಟ್ಸಾಪ್ ಧ್ವನಿ ಕರೆ ಸೌಲಭ್ಯ ಸಿಗುತ್ತದೆ.
* ಪ್ರಸ್ತುತ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಈ ಸೌಲಭ್ಯ ಸಿಗುತ್ತದೆ. ಪರೀಕ್ಷಾ ಹಂತದಲ್ಲಿರುವ ಈ ಸೌಲಭ್ಯವನ್ನು ಮುಂದೆ ಉಳಿತ ಸಾಫ್ಟ್‌ವೇರ್‌ಗಳಿಗೂ ವಿಸ್ತರಿಸುವ ಯೋಜನೆಯನ್ನು ವಾಟ್ಸಾಪ್ ಕಂಪನಿ ಹೊಂದಿದೆ.
* ಆಂಡ್ರಾಯ್ಡ್ ಬಳಕೆದಾರರು ವಾಟ್ಸಾಪ್‌ನ ಹೊಸ ಆವೃತ್ತಿಯ 2.11.508 ಹೊಂದಿರಬೇಕು. ಈ ಸಾಫ್ಟ್‌ವೇರ್ ಅಪ್‌ಡೇಟ್ ನಿಮಗೆ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಸಿಗುವುದಿಲ್ಲ. ವಾಟ್ಸಾಪ್ ಆ್ಯಪ್ ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಆಂಡ್ರಾಯ್ಡ್ ವಿಭಾಗದಲ್ಲಿ ಲಭ್ಯವಿರುವ ಸಾಫ್ಟ್‌ವೇರ್ ಅನ್ನು ೋಜಕ ಫೈಲ್ ಮೂಲಕ ಅಪ್‌ಡೇಟ್ ಮಾಡಿಕೊಳ್ಳಬಹುದು.