ಶೀಘ್ರವೇ ಸಿಮ್ ಕಾರ್ಡ್ ಜಾಗಕ್ಕೆ ಇ-ಸಿಮ್?

ಪೇಜರ್, ಕಾರ್ ಫೋನ್ ನಂತೆಯೇ ಸಿಮ್ ಕಾರ್ಡ್ ಕೂಡ ಶೀಘ್ರದಲ್ಲೇ ಇತಿಹಾಸದ ಪುಟ ಸೇರಲಿದೆ...
ಇ-ಸಿಮ್ ಕಾರ್ಡ್
ಇ-ಸಿಮ್ ಕಾರ್ಡ್
Updated on: 

ಲಂಡನ್: ಪೇಜರ್, ಕಾರ್ ಫೋನ್ ನಂತೆಯೇ ಸಿಮ್ ಕಾರ್ಡ್ ಕೂಡ ಶೀಘ್ರದಲ್ಲೇ ಇತಿಹಾಸದ ಪುಟ ಸೇರಲಿದೆ.

ಸಿಮ್ ಕಾರ್ಡ್‍ಗಳ ಜಾಗದಲ್ಲಿ ಇ-ಸಿಮ್ ಗಳನ್ನು ತರಲು ಆ್ಯಪಲ್ ಮತ್ತು ಸ್ಯಾಮ್ ಸಂಗ್ ಚಿಂತನೆ ನಡೆಸುತ್ತಿದೆ. ಮೊಬೈಲ್ ಟೆಲಿಕಾಂ ಇಂಡಸ್ಟ್ರಿಯನ್ನು ಪ್ರತಿನಿಧಿಸುತ್ತಿರುವ ಜಿಎಸ್‍ಎಂಎ ಜತೆ ಈ ಎರಡೂ ಮೊಬೈಲ್ ಸಂಸ್ಥೆಗಳು ಈ ಬಗ್ಗೆ ಮಾತುಕತೆ  ನಡೆಸುತ್ತಿದೆ ಎಂದು ಡೈಲಿ ಮೇಲ್ ವರದಿ ಮಾಡಿದೆ.

ಎಲೆಕ್ಟ್ರಾನಿಕ್ ಸಿಮ್ ಕಾರ್ಡ್‍ಗಳ ಬಳಕೆಯು ಬಹಳ ಸರಳವಾಗಿದ್ದು, ಗ್ರಾಹಕರು ಸುಲಭವಾಗಿ ಮೊಬೈಲ್ ನೆಟ್ ವರ್ಕ್‍ಗಳನ್ನು ಅದಲು ಬದಲು ಮಾಡಬಹುದು. ಐಪ್ಯಾಡ್ ಏರ್ 2 ಜೊತೆಗೆ ಬಿಡುಗಡೆಯಾದ ಆ್ಯಪಲ್ ಸಿಮ್ ನಲ್ಲಿ ಬಳಸಲಾದ ತಂತ್ರಜ್ಞಾನದ ಮಾದರಿಯನ್ನೇ ಇ-ಸಿಮ್ ನಲ್ಲೂ ಬಳಸಲಾಗುತ್ತದೆ.

ಹೀಗಾಗಿ ಗ್ರಾಹಕರು ಡಾಟಾ ನೆಟ್‍ವರ್ಕ್ ಅನ್ನು ಸುಲಭವಾಗಿ ವಿನಿಮಯ ಮಾಡಿಕೊಳ್ಳ ಬಹುದು. ಇ-ಸಿಮ್ ಅನ್ನು ಸ್ಮಾರ್ಟ್ ಫೋನ್ ಅಥವಾ ಟ್ಯಾಬ್ಲೆಟ್‍ನಲ್ಲೂ ಬಳಸಬಹುದಾಗಿದೆ. ಮುಂದಿನ ತಲೆಮಾರಿನ ಎಲ್ಲ  ಫೋನುಗಳೂ ಇ-ಸಿಮ್ಅನ್ನು ಒಳಗೊಂಡಿರಲಿದೆ. 2016ರ ವೇಳೆಗೆ ಹೊಸ ಸಿಮ್ ಚಾಲ್ತಿಗೆ ಬರಬಹುದು ಎಂದು ಜಿಎಸ್‍ಎಂಎ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com