ವೇಸ್ಟ್ ಕಂಪ್ಯೂಟರ್ ಗೆ ಸಿಕ್ಕಿತು ರು.1.27 ಕೋಟಿ

ಒಬ್ಬರಿಗೆ ಬೇಡವಾದದ್ದು ಮತ್ತೊಬ್ಬರ ಪಾಲಿಗೆ ಚಿನ್ನದ ಮೊಟ್ಟೆಯಾದ ಪ್ರಕರಣವಿದು! ಹೌದು, ಎಲೆಕ್ಟ್ರಾನಿಕ್ ವೇಸ್ಟ್ ಎಂದು ರೀಸೈಕಲ್ ಕಂಪನಿಯೊಂದಕ್ಕೆ ಮಹಿಳೆಯೊಬ್ಬಳು ಕೊಟ್ಟುಹೋಗಿದ್ದ ಕಂಪ್ಯೂಟರ್..
1976ರಲ್ಲಿ ಸ್ಟೀವ್ ಜಾಬ್ಸ್ ರೂಪಿಸಿದ್ದ ಅಪರೂಪದ ಆ್ಯಪಲ್- ಐ ಕಂಪ್ಯೂಟರ್!
1976ರಲ್ಲಿ ಸ್ಟೀವ್ ಜಾಬ್ಸ್ ರೂಪಿಸಿದ್ದ ಅಪರೂಪದ ಆ್ಯಪಲ್- ಐ ಕಂಪ್ಯೂಟರ್!

ಮಿಲಿಪಿಟಾಸ್: ಒಬ್ಬರಿಗೆ ಬೇಡವಾದದ್ದು ಮತ್ತೊಬ್ಬರ ಪಾಲಿಗೆ ಚಿನ್ನದಮೊಟ್ಟೆಯಾದ ಪ್ರಕರಣವಿದು!

ಹೌದು, ಎಲೆಕ್ಟ್ರಾನಿಕ್ ವೇಸ್ಟ್ ಎಂದು ರೀಸೈಕಲ್ ಕಂಪನಿಯೊಂದಕ್ಕೆ ಮಹಿಳೆಯೊಬ್ಬಳು ಕೊಟ್ಟುಹೋಗಿದ್ದ ಕಂಪ್ಯೂಟರ್ ಈಗ ರು.1.27 ಕೋಟಿಗೆ ಮಾರಾಟವಾಗಿದೆ. ಗಂಡ ತೀರಿಕೊಂಡ ಬಳಿಕ ಗ್ಯಾರೇಜ್ ಕ್ಲೀನ್ ಮಾಡುವ ವೇಳೆ ಮಹಿಳೆ ಕಣ್ಣಿಗೆ ಈ ಕಂಪ್ಯೂಟರ್ ಬಿದ್ದಿತ್ತು. ಹಳೆಯ ಎಲೆಕ್ಟ್ರಾನಿಕ್ ವಸ್ತುವಾಗಿದ್ದ ಕಾರಣ ಆಕೆ ಅದನ್ನು ಬಾಕ್ಸ್ ನಲ್ಲಿ ಪ್ಯಾಕ್ ಮಾಡಿ ಸಿಲಿಕಾನ್ ವ್ಯಾಲಿಯ ರೀಸೈಕಲ್ ಕಂಪನಿಯೊಂದಕ್ಕೆ ಕೊಟ್ಟುಹೋಗಿದ್ದಳು.

ರೀಸೈಕಲಿಂಗ್ ಸಂಸ್ಥೆ ಕೆಲಸಗಾರರು ವಾರದ ನಂತರ ಆ ಬಾಕ್ಸ್ ತೆರೆದಾಗ ಅಚ್ಚರಿ ಕಾದಿತ್ತು. ಯಾಕೆಂದರೆ ಆ ಬಾಕ್ಸ್ ನಲ್ಲಿದ್ದುದು ಅಪರೂಪದ ಆ್ಯಪಲ್- ಐ ಕಂಪ್ಯೂಟರ್! ಇದೊಂದು ಫಸ್ಟ್ ಜನರೇಷನ್ ಕಂಪ್ಯೂಟರ್ ಆಗಿದ್ದು, ಇಂಥ 200 ಡೆಸ್ಕ್ ಟಾಪ್‍ಗಳಷ್ಟೇ ಮಾರುಕಟ್ಟೆಗೆ ಬಿಡುಗಡೆಯಾಗಿದ್ದವು. ಈ ಕಂಪ್ಯೂಟರ್ ಅನ್ನು ಆ್ಯಪಲ್ ಸಂಸ್ಥೆಯ ಮಾಜಿ ಸಿಇಒ ಸ್ಟೀವ್ ಜಾಬ್ಸ್, ಸ್ಟೇವ್ ವೊಝಾನಿಯಕ್ ಮತ್ತು ರಾನ್ ವೈನ್ 1976ರಲ್ಲಿ ರಚಿಸಿದ್ದ ಕಂಪ್ಯೂಟರ್ ಇದು.

ಈ ಅಪರೂಪದ ಕಂಪ್ಯೂಟರ್ ಅನ್ನು ರೀಸೈಕಲಿಂಗ್ ಕಂಪನಿಯ ಮಾಲಿಕ ರು.1.27 ಕೋಟಿಗೆ ಮಾರಾಟ ಮಾಡಿದ್ದಾರೆ. ಸಾಮಾನ್ಯವಾಗಿ ಕಂಪನಿ ಈ ರೀತಿಯಾಗಿ ವಸ್ತುಗಳನ್ನು ಮಾರಾಟ ಮಾಡಿದ ಹಣದಲ್ಲಿ ಶೇ.50ರಷ್ಟನ್ನು ಅದರ ಮೂಲ ಮಾಲೀಕರಿಗೆ ನೀಡುತ್ತದೆ. ಆದರೆ, ಈ ಮಹಿಳೆ ತನ್ನ ವಿಳಾಸ ಬಿಟ್ಟುಹೋಗಿಲ್ಲ. ಹಾಗಾಗಿ ಆಕೆಯ ಪತ್ತೆಗಾಗಿ ಈಗ ಕಂಪನಿ ಹುಡುಕಾಟ ಆರಂಭಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com