ರೋಬೋಟ್‌ಗಳೇ ಕಥಾಪಾತ್ರಗಳಾಗಿರುವ ಹಲವಾರು ಸಿನಿಮಾಗಳನ್ನು ನಾವು ನೋಡಿದ್ದೇವೆ . ಆದರೆ ಒಂದು ರೋಬೋಟ್ ಮನುಷ್ಯನ ಕಥಾಪಾತ್ರವಾಗಿ ಕಾಣಿಸಿಕೊಂಡಿರುವ ಜಗತ್ತಿನ ಮೊದಲ ಸಿನಿಮಾ ಈಗ ತೆರೆಕಾಣಲು ಸಿದ್ದತೆ ನಡೆಸುತ್ತಿದೆ.
ಸಯೊನಾರಾ ಎಂಬ ಜಪಾನೀಸ್ ಚಿತ್ರದಲ್ಲಿ ಒಂದು ರೋಬೋಟ್ ಹಿರೋಯಿನ್ ಆಗಿ ಕಾಣಿಸಿಕೊಳ್ಳಲಿದೆ.
ಜೆಮಿನಾಯ್ಡ್ ಎಫ್ ಎಂಬ ಹೆಸರಿರುವ ಈ ಆ್ಯಂಡ್ರಾಯ್ಡ್ ನಾಯಕಿಯನ್ನು ಒಸಾಕಾ ವಿವಿಯ ಪ್ರಮುಖ ತಂತ್ರಜ್ಞ ಹಿರೋಶಿ ಇಶಿಗುರಾ ತಯಾರಿಸಿದ್ದಾರೆ. ಜಪಾನ್ ಮೇಲಿನ ಪರಮಾಣು ದಾಳಿಯ ನಂತರ ಕಥೆಯೇ ಸಯೊನಾರಾ ಚಿತ್ರದ ಕಥಾವಸ್ತು.
ಕೋಜಿ ಫುಕಾಡಾ ನಿರ್ದೇಶನದ ಈ ಚಿತ್ರದಲ್ಲಿ ತನ್ನೆರಡೂ ಕಾಲುಗಳನ್ನು ಕಳೆದು ಕೊಂಡು ಗಾಲಿಕುರ್ಚಿಯಲ್ಲೇ ಬದುಕು ಸಾಗಿಸುವ ಲಿಯೋನಾ ಎಂಬ ಹುಡುಗಿಯ ಪಾತ್ರದಲ್ಲಿ ಜೆಮಿನಾಯ್ಡ್ ಎಫ್ ಕಾಣಿಸಿಕೊಳ್ಳಲಿದೆ.