ಜಗತ್ತಿನ ಜನಪ್ರಿಯ ಸಾಮಾಜಿಕ ತಾಣವಾದ ಫೇಸ್ಬುಕ್ 2016ರಲ್ಲಿ ತನ್ನದೇ ಆದ ಉಪಗ್ರಹವೊಂದನ್ನು ಉಡಾವಣೆ ಮಾಡಲಿದೆ. ಈ ವಿಷಯವನ್ನು ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಜೂಕರ್ಬರ್ಗ್ ಅವರು ತಮ್ಮ ಫೇಸ್ ಬುಕ್ ಅಧಿಕೃತ ಪುಟದಲ್ಲಿ ಬಹಿರಂಗಗೊಳಿಸಿದ್ದಾರೆ.
ಆಫ್ರಿಕಾ ಖಂಡದಲ್ಲಿರುವ ಜನರಿಗೆ ಉಚಿತ ಇಂಟರ್ನೆಟ್ ಸಂಪರ್ಕ ಕಲ್ಪಿಸುವುದಕ್ಕಾಗಿಯೇ ಈ ಉಪಗ್ರಹವನ್ನು ಉಡ್ಡಯನ ಮಾಡಲಾಗುತ್ತಿದೆ.
ಫ್ರಾನ್ಸ್ Eutelsat ಸಹಭಾಗಿತ್ವದೊಂದಿಗೆ ಫೇಸ್ಬುಕ್ ಕೃತಕ ಉಪಗ್ರಹವೊಂದನ್ನು ತಯಾರಿಸಲಿದೆ ಎಂದು ಜೂಕರ್ಬರ್ಗ್ ತಮ್ಮ ಪೋಸ್ಟ್ ನಲ್ಲಿ ಹೇಳಿದ್ದಾರೆ. ಉಪಗ್ರಹದ ಹೆಸರು AMOS-6 ಎಂದಾಗಿದೆ. ಇದೀಗ ನಿರ್ಮಾಣ ಹಂತದಲ್ಲಿರುವ ಉಪಗ್ರಹದ ಫೋಟೋ ಕೂಡಾ ಅವರು ಫೇಸ್ ಬುಕ್ ನಲ್ಲಿ ಶೇರ್ ಮಾಡಿದ್ದಾರೆ.
I'm excited to announce our first project to deliver internet from space. As part of our Internet.org efforts to connect...