ಮಂಗಳನಲ್ಲಿ ಬುದ್ಧನ ಮಾದರಿಯ ಆಕೃತಿಯನ್ನು ಹೋಲುವ ಆಕೃತಿ ಪತ್ತೆ?

ಇತ್ತೀಚಿನ ದಿನಗಳಲ್ಲಿ ಮಂಗಳ ಗ್ರಹದಲ್ಲಿ ಪ್ರತಿಮೆಗಳ ಮಾದರಿಯನ್ನು ಹೋಲುವ ಆಕೃತಿಗಳು ಕಂಡುಬರುತ್ತಿದೆ.
ಮಂಗಳ ಗ್ರಹದಲ್ಲಿ ಬುದ್ಧನ ಪ್ರತಿಮೆಯನ್ನು ಹೋಲುವ ಆಕೃತಿ
ಮಂಗಳ ಗ್ರಹದಲ್ಲಿ ಬುದ್ಧನ ಪ್ರತಿಮೆಯನ್ನು ಹೋಲುವ ಆಕೃತಿ
Updated on: 

ಇತ್ತೀಚಿನ ದಿನಗಳಲ್ಲಿ ಮಂಗಳ ಗ್ರಹದಲ್ಲಿ ಪ್ರತಿಮೆಗಳ ಮಾದರಿಯನ್ನು ಹೋಲುವ ಆಕೃತಿಗಳು ಕಂಡುಬರುತ್ತಿದೆ. ಇತ್ತೀಚಿನ ವರದಿಗಳ ಪ್ರಕಾರ ಮಂಗಳ ಗ್ರಹದಲ್ಲಿ ಬುದ್ಧನ ಪ್ರತಿಮೆಯನ್ನು ಹೋಲುವ ಆಕೃತಿ ಪತ್ತೆಯಾಗಿದೆ.
ಏಲಿಯನ್ ಗಳ ಬಗ್ಗೆ ಅಧ್ಯಯನ ನಡೆಸುತ್ತಿರುವ ಯುಎಫ್ಒ ಸೈಟಿಂಗ್ಸ್‌ ಡೇಲಿ ಪ್ರಕಟಿಸಿರುವ ವರದಿ ಪ್ರಕಾರ ಮಂಗಳನಲ್ಲಿರುವ ಬಂಡೆಗಳ ಮೇಲೆ ಬುದ್ಧನ ಪ್ರತಿಮೆಯನ್ನು ಹೋಲುವ ಆಕೃತಿಯನ್ನು ಪತ್ತೆ ಮಾಡಿದೆ. ಮಂಗಳ ಗ್ರಹದಲ್ಲಿರಬಹುದಾದ ಜೀವಿಗಳಿಗೆ ಎಲ್ಲಾ ಧರ್ಮಗಳ ಬಗ್ಗೆ ತಿಳಿದಿತ್ತು. ಸಾವಿನ ನಂತರವೂ ಜೀವನದ ಬಗ್ಗೆ ನಂಬಿಕೆ ಹೊಂದಿದ್ದರು ಎಂದು  ಯುಎಫ್ಒ ಡೇಲಿ ವರದಿ ಮಾಡಿದೆ. 
ಬುದ್ಧನ ಮಾದರಿಯ ಆಕೃತಿ ಮಂಗಳಾ ಗ್ರಹದಲ್ಲಿ ಜೀವಿಗಳಿದ್ದಿರಬಹುದು ಎಂಬುದನ್ನು ಪುಷ್ಟೀಕರಿಸುತ್ತದೆ ಎಂದು ಯುಎಫ್ಒ ಸೈಟಿಂಗ್ಸ್‌ ಡೇಲಿ ಅಭಿಪ್ರಾಯಪಟ್ಟಿದೆ. ಇದಕ್ಕೂ ಮುನ್ನ ಮಂಗಳನಲ್ಲಿ ತೇಲುವ ಚಮಚ, ಏಡಿ ಕಂಡುಬಂದಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com