ವಾಟರ್ ಪ್ರೂಫ್ ಸಂಶೋಧಕ ಚಾರ್ಲ್ಸ್ ಮಾಕಿಂತೋಷ್ ಜನ್ಮದಿನಕ್ಕೆ ಗೂಗಲ್ ಡೂಡಲ್ ಗೌರವ!

ಖ್ಯಾತ ಸಂಶೋಧಕ ಚಾರ್ಲ್ಸ್ ಮಾಕಿಂತೋಷ್ ಅವರ 250ನೇ ಜನ್ಮ ದಿನಾಚರಣೆ ಪ್ರಯುಕ್ತ ಖ್ಯಾತ ಸರ್ಚ್ ಎಂಜಿನ್ ಗೂಗಲ್ ಡೂಡಲ್ ಬಿಡುಸುವ ಮೂಲಕ ಗೌರವ ಸೂಚಿಸಿದೆ.
ಗೂಗಲ್ ಡೂಡಲ್ ಚಿತ್ರ
ಗೂಗಲ್ ಡೂಡಲ್ ಚಿತ್ರ

ನವದೆಹಲಿ: ಖ್ಯಾತ ಸಂಶೋಧಕ ಚಾರ್ಲ್ಸ್ ಮಾಕಿಂತೋಷ್ ಅವರ 250ನೇ ಜನ್ಮ ದಿನಾಚರಣೆ ಪ್ರಯುಕ್ತ ಖ್ಯಾತ ಸರ್ಚ್ ಎಂಜಿನ್ ಗೂಗಲ್ ಡೂಡಲ್ ಬಿಡುಸುವ ಮೂಲಕ ಗೌರವ ಸೂಚಿಸಿದೆ.

ವಾಟರ್ ಪ್ರೂಫ್ ಜಾಕೆಟ್ ಗಳನ್ನು ಸಂಶೋಧಿಸಿದ್ದ ಚಾರ್ಲ್ಸ್ ಮಾಕಿಂತೋಷ್ ಅವರು ಡಿಸೆಂಬರ್ 29 1766ರಲ್ಲಿ ಜನಿಸಿದರು. ಸ್ಕಾಟ್ಲೆಂಡಿನಲ್ಲಿ ರಸಾಯನ ಶಾಸ್ತ್ರದ ವಿಜ್ಞಾನಿಯಾಗಿದ್ದ ಚಾರ್ಲ್ಸ್ ಮಾಕಿಂತೋಷ್ ಅವರು, ಮಳೆಯಲ್ಲೂ  ನೆನೆಯದ ಜಾಕೆಟ್ ಗಳನ್ನು ಅಭಿವೃದ್ಧಿಗೊಳಿಸಿದ್ದರು. ಅವರ ಈ ಜಾಕೆಟ್ ಗಳಿಗೆ ಮಾಕಿಂತೋಷ್ ಜಾಕೆಟ್ ಗಳು ಎಂದೇ ಕರೆಯಲಾಗುತ್ತಿತ್ತು. 1824ರಲ್ಲಿ ಈ ಬಗೆ ರೈನ್ ಕೋಟ್ ಗಳ ಮೊದಲ ಬಳಕೆಯಾಗಿತ್ತು.

ರಸಾಯನಶಾಸ್ತ್ರದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ಚಾರ್ಲ್ಸ್ ಮಾಕಿಂತೋಷ್ ಅವರು ನಿತ್ಯ ಒಂದಿಲ್ಲೊಂದು ಪ್ರಯೋಗದಲ್ಲಿ ನಿರತರಾಗುತ್ತಿದ್ದರು. ಭಾರತದಲ್ಲಿ ಹೆಚ್ಚಾಗಿ ಬೆಳೆಯುತ್ತಿದ್ದ ರಬ್ಬರ್ ಮತ್ತು ಟಾರ್ ಬಳಕೆ ಮಾಡಿ ನೀರಿಗೆ  ಪ್ರತಿರೋಧ ಒಡ್ಡುವ ಫ್ಯಾಬ್ರಿಕ್ ಅನ್ನು ಕಂಡು ಹಿಡಿದರು. ಫ್ಯಾಬ್ರಿಕ್ ಮೂಲಕ ಜಾಕೆಟ್ ಗಳನ್ನು ತಯಾರಿಸಿದ್ದರು. ಇದು ಮಳೆ ನೀರಿನ ಪ್ರತಿರೋಧಕಗಳಾಗಿದ್ದವು. ಈ ಜಾಕೆಟ್ ಗಳಿಗೆ ರೈನ್ ಕೋಟ್ ಅಥವಾ ಮ್ಯಾಕಿಂಚೋಷ್ ಜಾಕೆಟ್  ಗಳು ಎಂದು ಕರೆಯುತ್ತಿದ್ದರು.

1843ರಲ್ಲಿ ಚಾರ್ಲ್ಸ್ ಮಾಕಿಂತೋಷ್ ಅವರು ಸ್ಕಾಟ್ಲೆಂಡಿನ ಡಂಚಟ್ಟನ್ ನಲ್ಲಿ ನಿಧನರಾದರು. ಗ್ಲಾಸ್ಗೋದಲ್ಲಿರುವ ಕೆಥೆಡ್ರಿಲ್ ಚರ್ಚ್ ಯಾರ್ಡ್ ನಲ್ಲಿ ಅವರ ಅಂತಿಮ ಸಂಸ್ಕಾರ ನಡೆಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com