ಭಯೋತ್ಪಾದನೆಗೆ ಸಂಬಂಧಿಸಿದ 125,000 ಟ್ವಿಟರ್ ಅಕೌಂಟ್ ರದ್ದು

ಭಯೋತ್ಪಾದನೆಗೆ ಸಂಬಂಧಿಸಿದ ಬರೋಬ್ಬರಿ 12,000 ಅಕೌಂಟ್ ಗಳನ್ನು ಟ್ವಿಟರ್ ಇಂಕ್ ರದ್ದು ಮಾಡಿದೆ ಎಂದು ಕಂಪನಿ ಹೇಳಿಕೊಂಡಿದೆ...
ಭಯೋತ್ಪಾದನೆಗೆ ಸಂಬಂಧಿಸಿದ 125,000 ಟ್ವಿಟರ್ ಅಕೌಂಟ್ ರದ್ದು
ಭಯೋತ್ಪಾದನೆಗೆ ಸಂಬಂಧಿಸಿದ 125,000 ಟ್ವಿಟರ್ ಅಕೌಂಟ್ ರದ್ದು
Updated on: 

ವಾಷಿಂಗ್ಟನ್: ಭಯೋತ್ಪಾದನೆಗೆ ಸಂಬಂಧಿಸಿದ ಬರೋಬ್ಬರಿ 12,000 ಅಕೌಂಟ್ ಗಳನ್ನು ಟ್ವಿಟರ್ ಇಂಕ್ ರದ್ದು ಮಾಡಿದೆ ಎಂದು ಕಂಪನಿ ಹೇಳಿಕೊಂಡಿದೆ.

ಈ ಕುರಿತಂತೆ ಕಂಪನಿ ತನ್ನ ಬ್ಲಾಗ್ ನಲ್ಲಿ ಬರೆದಿದ್ದು, 2015ರ ಬಳಿಕದ ಭಯೋತ್ಪಾದನೆ ಸಂಬಂಧಿಸಿದ ಅಕೌಂಟ್ ಗಳನ್ನು ಟ್ವಿಟರ್ ಇಂಕ್ ತೆಗೆದುಹಾಕಿದ್ದು, ಇವುಗಳಲ್ಲಿ ಸಾಕಷ್ಟು ಅಕೌಂಟ್ ಗಳು ಇಸ್ಲಾಮಿಕ್ ಸ್ಟೇಟ್ ಆಫ್ ಇರಾನ್ ಅ್ಯಂಡ್ ಇರಾಕ್ (ಇಸಿಸ್) ಉಗ್ರ ಸಂಘಟನೆಗೆ ಸೇರಿರುವುದಾಗಿದೆ. ಈ ಬಗ್ಗೆ ಇತರೆ ಬಳಕೆದಾರರು ನೀಡಿದ ಮಾಹಿತಿ ಹಿನ್ನೆಲೆಯಲ್ಲಿ ಈ ಖಾತೆಗಳನ್ನು ರದ್ದು ಮಾಡಲಾಗಿದೆ ಎಂದು ಹೇಳಿಕೊಂಡಿದೆ.

ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಬಳಕೆಯಲ್ಲಿರುವ ಫೇಸ್ ಬುಕ್ ಸೇರಿದಂದೆ ಇನ್ನಿತರೆ ಕಂಪನಿಗಳು ವಿವಾದಾತ್ಮಕ ವಿಷಯಗಳು ಹಾಗೂ ಖಾತೆಗಳ ಬಗ್ಗೆ ಕಠಿಣ ಕ್ರಮ ಕೈಗೊಂಡಿರುವ ಹಿನ್ನೆಲೆಯಲ್ಲಿ ಇದೀಗ ಟ್ವಿಟರ್ ಕೂಡ ಭಯೋತ್ಪಾದನೆಗೆ ಸಂಬಂಧಿಸಿದ ಅಕೌಂಟ್ ಗಳನ್ನು ತೆಗೆದುಹಾಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com