ಟ್ವಿಟರ್‍ಗೆ 10ಸಾವಿರ ಅಕ್ಷರ ಮಿತಿ

ಕೇವಲ 140 ಅಕ್ಷರಗಳಿಗೆ ಸೀಮಿತವಾಗಿದ್ದ ಟ್ವಿಟರ್ ಮಿತಿಯನ್ನು 10ಸಾವಿರ ಅಕ್ಷರಗಳಿಗೆ ವಿಸ್ತರಿಸುವ ಕುರಿತು ಟ್ವಿಟರ್ ಚಿಂತನೆ ನಡೆಸಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಲಂಡನ್: ಕೇವಲ 140 ಅಕ್ಷರಗಳಿಗೆ ಸೀಮಿತವಾಗಿದ್ದ ಟ್ವಿಟರ್ ಮಿತಿಯನ್ನು 10ಸಾವಿರ ಅಕ್ಷರಗಳಿಗೆ ವಿಸ್ತರಿಸುವ ಕುರಿತು ಟ್ವಿಟರ್ ಚಿಂತನೆ ನಡೆಸಿದೆ.

ಸ್ಪೇಸ್, ವ್ಯಾಕರಣ ಚಿಹ್ನೆಗಳು ಸೇರಿದಂತೆ ಹತ್ತು ಸಾವಿರ ಪದಗಳನ್ನು ಬರೆಯುವ ಅವಕಾಶ ಟ್ವಿಟರ್‍ನಲ್ಲಿ ಲಭ್ಯವಾಗಲಿದೆ ಎಂದು `ಟೆಕ್‍ನ್ಯೂಸ್' ವೆಬ್ ಸೈಟ್ ವರದಿ ಮಾಡಿದೆ. ಮಾರ್ಚ್ ಒಳಗಾಗಿ ಈ ಸೇವೆ ನೀಡುವ ಯೋಜನೆ ಹಾಕಿಕೊಂಡಿರುವ ಕಂಪನಿ ಅಧಿಕೃತ ದಿನಾಂಕ ತಿಳಿಸಿಲ್ಲ.

ಟ್ವಿಟರ್‍ನ ಸಿಇಓ ಜಾಕ್ ಡೊರ್ಸಿ ಟ್ವೀಟ್ ಮಾಡಿದ್ದಾರಾದರೂ ನೇರವಾಗಿ ವಿಷಯವನ್ನು ಬಹಿರಂಗಪಡಿಸಿಲ್ಲ. ಸದ್ಯಕ್ಕೆ 140ಕ್ಕಿಂತ ಹೆಚ್ಚು ಅಕ್ಷರಗಳ ಟ್ವೀಟ್ ಸಾಧ್ಯತೆಗಾಗಿ ಟೆಸ್ಟಿಂಗ್ ನಡೆದಿದೆ. 30 ಕೋಟಿ ಬಳಕೆದಾರರಿರುವ ಟ್ವಿಟರ್ ಜಾಹೀರಾತುಗಳಿಂದ ಆದಾಯ ನಿರೀಕ್ಷಿಸುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com