ವಾಟ್ಸಪ್ ಅಪಡೇಟ್: ಶೀಘ್ರವೇ ಕೋಟ್ ಮತ್ತು ರಿಪ್ಲೈ ಆಯ್ಕೆ

ಖ್ಯಾತ ಸ್ಮಾರ್ಟ್ ಫೋನ್ ಸಾಮಾಜಿಕ ತಾಣ ವಾಟ್ಸಪ್ ತನ್ನ ನೂತನ ಬೀಟಾ ಅಪಡೇಟ್ ವರ್ಷನ್​ ನಲ್ಲಿ ಹೊಸ ಆಯ್ಕೆಗಳನ್ನು ನೀಡಲು ಮುಂದಾಗಿದೆ.
ವಾಟ್ಸಪ್ (ಸಂಗ್ರಹ ಚಿತ್ರ)
ವಾಟ್ಸಪ್ (ಸಂಗ್ರಹ ಚಿತ್ರ)
Updated on: 

ನವದೆಹಲಿ: ಖ್ಯಾತ ಸ್ಮಾರ್ಟ್ ಫೋನ್ ಸಾಮಾಜಿಕ ತಾಣ ವಾಟ್ಸಪ್ ತನ್ನ ನೂತನ ಬೀಟಾ ಅಪಡೇಟ್ ವರ್ಷನ್​ ನಲ್ಲಿ ಹೊಸ ಆಯ್ಕೆಗಳನ್ನು ನೀಡಲು ಮುಂದಾಗಿದೆ.

ಫೇಸ್ ಬುಕ್ ಮತ್ತು ಟ್ವಿಟರ್ ನಲ್ಲಿ ಇರುವಂತೆ ಕೋಟ್ ಆಯ್ಕೆ ಅಂದರೆ ಬೇರೆಯವರು ಮಾಡಿರುವ ಹೇಳಿಕೆ ನಿಮಗೆ ಇಷ್ಟವಾದಲ್ಲಿ ಅದನ್ನು ನಿಮ್ಮದೇ ಖಾತೆ ಮೂಲಕ ನಿಮ್ಮ ನೆಚ್ಚಿನ ಗ್ರೂಪ್ ಅಥವಾ ಸದಸ್ಯರಿಗೆ ಅಪ್​ಲೋಡ್ ಮಾಡಬಹುದು ಮತ್ತು ಮರುಉತ್ತರ ಕಳುಹಿಸುವ ಆಯ್ಕೆ ನೀಡಿದೆ.

ಬರಹ ಮತ್ತು ಚಿತ್ರದ ರೂಪದಲ್ಲಿರುವ ಕೋಟ್​ಗಳನ್ನು ಅದರ ಮೇಲೆ ಕೈ ಬೆರಳನ್ನು ಒತ್ತಿ ಹಿಡಿದು ಮತ್ತೊಬ್ಬರಿಗೆ ಕಳುಹಿಸುವ ಮುಂಚೆ ನಿಮಗೆ ಬೇಕಾದಂತೆ ಎಡಿಟ್ ಮಾಡಬಹುದಾದ ವಿನೂತನ ಸೇವೆಯನ್ನೂ ಕೂಡ ನೂತನ ಬೀಟಾ ವರ್ಷನ್​ ಒಳಗೊಂಡಿದೆ ಎಂದು ವಾಟ್ಸಪ್​ ಸಂಸ್ಥೆ ಹೇಳಿಕೊಂಡಿದೆ. ನಾವು ಕಳುಹಿಸುವ ಎಡಿಟ್ ಮಾಡಿರುವ ಬರಹ ಅಥವಾ ಚಿತ್ರದಲ್ಲಿ ಮೂಲ ಪ್ರತಿಯೊಂದಿಗೆ ನೀವು ಮಾಡಿರುವ ಬದಲಾವಣೆ ಕೂಡ ಗೋಚರಿಸಲಿದೆಯಂತೆ. ಸದ್ಯ ಬೀಟಾ ವರ್ಷನ್​ನಲ್ಲಿ ಪ್ರಾಯೋಗಕವಾಗಿ ಜಾರಿಯಲ್ಲಿರುವ ಸೇವೆ ಶೀಘ್ರದಲ್ಲೆ ಎಲ್ಲರಿಗೂ ಲಭ್ಯವಾಗಲಿದೆ. ಇದಲ್ಲದೇ ಜಿಫ್ (ಜಿಐಎಫ್) ವಾಲ್​ಪೇಪರ್​ಗಳ ಬೆಂಬಲ ವಾಟ್ಸ್ ಆಪ್​ನಲ್ಲಿ ದೊರಕಲಿದೆ ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com