ಅಹಾರದ ಕೊಬ್ಬು ಕರಗಿಸುವ ತಟ್ಟೆ ಅಭಿವೃದ್ಧಿ ಪಡಿಸಿದ ವಿಜ್ಞಾನಿಗಳು

ದಪ್ಪಗಾಗುವ ಭೀತಿಯಿಂದಾಗಿ ಹಲವರು ಆಹಾರ ತಿನ್ನುವುದನ್ನೇ ತ್ಯಜಿಸಿ ಬಿಡುತ್ತಾರೆ.. ಆದರೆ ಇಂತಹ ಮಂದಿಗಾಗಿ ಥಾಯ್ಲೆಂಡ್ ನ ವಿಜ್ಞಾನಿಗಳು ವಿಶೇಷ ತಟ್ಟೆಯೊಂದನ್ನು ಅಭಿವೃದ್ಧಿ ಪಡಿಸಿದ್ದು, ಈ ತಟ್ಟೆ ಆಹಾರದ ಕೊಬ್ಬನ್ನು ಹೀರಿ ಬಿಡುತ್ತದೆಯಂತೆ...
ಅಬ್ಸಾರ್ಬ್ ಪ್ಲೇಟ್ (ಸಂಗ್ರಹ ಚಿತ್ರ)
ಅಬ್ಸಾರ್ಬ್ ಪ್ಲೇಟ್ (ಸಂಗ್ರಹ ಚಿತ್ರ)
Updated on: 

ಬ್ಯಾಂಕಾಕ್: ದಪ್ಪಗಾಗುವ ಭೀತಿಯಿಂದಾಗಿ ಹಲವರು ಆಹಾರ ತಿನ್ನುವುದನ್ನೇ ತ್ಯಜಿಸಿ ಬಿಡುತ್ತಾರೆ.. ಆದರೆ ಇಂತಹ ಮಂದಿಗಾಗಿ ಥಾಯ್ಲೆಂಡ್ ನ ವಿಜ್ಞಾನಿಗಳು ವಿಶೇಷ ತಟ್ಟೆಯೊಂದನ್ನು  ಅಭಿವೃದ್ಧಿ ಪಡಿಸಿದ್ದು, ಈ ತಟ್ಟೆ ಆಹಾರದ ಕೊಬ್ಬನ್ನು ಹೀರಿ ಬಿಡುತ್ತದೆಯಂತೆ.

ತೆಳ್ಳಗಾಗುವ ಉದ್ದೇಶದಿಂದ ಆಹಾರದ ಬಗ್ಗೆ ಕಟ್ಟುನಿಟ್ಟಿನ ಪಥ್ಯ ಪಾಲಿಸುವವರು ಇನ್ನು ಮುಂದೆ ಯಾವುದೇ ಡಯಟ್ ಮಾಡದೇ ತಮಗಿಚ್ಛಿಸಿದ ಆಹಾರವನ್ನು ತಿನ್ನಬಹುದು. ಥಾಯ್ಲೆಂಡ್ ನ  ವಿಜ್ಞಾನಿಗಳ ಸಮೂಹವೊಂದು ವಿಶೇಷ ತಟ್ಟೆಯನ್ನು ಆವಿಷ್ಕರಿಸಿದ್ದು, ತಟ್ಟೆಯಲ್ಲಿ ಆಹಾರದ ಕೊಬ್ಬನ್ನು ಈ ತಟ್ಟೆ ಹೀರಿ ಬಿಡುತ್ತದೆಯೆಂತೆ. ಹೀಗಾಗಿ ಆಹಾರ ಕಡಿಮೆ ಪ್ರಮಾಣದ ಕ್ಯಾಲೋರಿ  ಹೊಂದಿರುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಈ ವಿಶಿಷ್ಟ ತಟ್ಟೆಯನ್ನು ಥಾಯ್ಲೆಂಡ್‌ನ ಹೆಲ್ತ್ ಪ್ರೊಮೋಷನ್ ಫೌಂಡೇಷನ್ ಸಂಸ್ಥೆ ಅಭಿವೃದ್ಧಿ ಪಡಿಸಿದ್ದು, ವಿಶೇಷ ತಂತ್ರಜ್ಞಾನದಿಂದ ಕೂಡಿದ  ತಟ್ಟೆಯಲ್ಲಿ ಆಹಾರ ಸೇವಿಸಿದರೆ ಕೊಬ್ಬು ದೇಹ ಸೇರುವುದಿಲ್ಲವೆಂದು ಹೇಳಿದ್ದಾರೆ.

‘ಅಬ್ಸಾರ್ಬ್ ಪ್ಲೇಟ್’ ಎಂಬ ಹೆಸರಿನ ವಿಶೇಷ ತಟ್ಟೆಯಲ್ಲಿ ಆಹಾರವನ್ನು ಹಾಕಿದ ಕೂಡಲೆ 30 ಕ್ಯಾಲೊರಿಯಷ್ಟು ಕೊಬ್ಬನ್ನು ಅದು ಹೀರಿಕೊಳ್ಳುತ್ತದೆಯಂತೆ. ಆಹಾರದಲ್ಲಿರುವ ಎಣ್ಣೆಯ ಅಥವಾ  ಜಿಡ್ಡಿನ ಅಂಶವನ್ನು ಹೀರಿಕೊಳ್ಳುವ ಮೂಲಕ ಆ ಜಿಡ್ಡು ಅಥವಾ ಎಣ್ಣೆ ಸೇವಿಸುವವನ ಹೊಟ್ಟೆ ಸೇರದಂತೆ ನೋಡಿಕೊಳ್ಳುತ್ತದೆ.

ಹೇಗೆ ಕಾರ್ಯನಿರ್ವಹಿಸುತ್ತದೆ ಈ ತಟ್ಟೆ
ಈ ವಿಶೇಷ ಅಬ್ಸಾರ್ಬ್ ಪ್ಲೇಟನ್ನು ವಿಶಿಷ್ಟ ವಿನ್ಯಾಸದಲ್ಲಿ ಅಭಿವೃದ್ಧಿಗೊಳಿಸಲಾಗಿದ್ದು, ಇದರಲ್ಲಿ ಸುಮಾರು 500 ಸಣ್ಣ-ಸಣ್ಣ ರಂಧ್ರಗಳನ್ನು ಕೊರೆಯಲಾಗಿದೆ. ಈ ತಟ್ಟೆಗೆ ಆಹಾರ ಹಾಕುತ್ತಿದ್ದಂತೆಯೇ  ಅದರಿಂದ ಸುಮಾರು 7 ಎಂ.ಎಲ್. ಎಣ್ಣೆಯನ್ನು ಅಂದರೆ, 30 ಕ್ಯಾಲೊರಿಯಷ್ಟನ್ನು ಈ ರಂಧ್ರಗಳು ಹೀರಿಕೊಳ್ಳುತ್ತದೆ.

ಥಾಯ್ಲೆಂಡ್ ಜನ ಎಣ್ಣೆ ಬಳಸಿದ ಆಹಾರವನ್ನೇ ಹೆಚ್ಚೆಚ್ಚು ಸೇವಿಸುತ್ತಿರುವುದರಿಂದ ಅಲ್ಲಿ ಬೊಜ್ಜಿನ ಸಮಸ್ಯೆ ಮಿತಿ ಮೀರಿದೆಯಂತೆ. ಇದರಿಂದಾಗಿ ರಕ್ತದ ಏರೊತ್ತಡ, ಮಧುಮೇಹ, ಹೃದಯ  ಸಂಬಂಧಿ ಕಾಯಿಲೆಗಳು ಜನರಲ್ಲಿ ಹೆಚ್ಚಾಗುತ್ತದೆ. ಆದರೂ ಹೆಚ್ಚು ಎಣ್ಣೆ ಬಳಸಿ ಮಾಡಿದ ಅಡುಗೆಯನ್ನೇ ಥಾಯ್ ಜನ ಇಷ್ಟಪಡುತ್ತಾರೆ. ಹೀಗಾಗಿ, ಹೆಚ್ಚು ಕೊಬ್ಬಿನಿಂದ ಕೂಡಿದ ಸೇವಿಸಿದರೂ ಅದು  ದೇಹ ಸೇರದಂತೆ ಮಾಡಲು ಈ ತಟ್ಟೆ ಅಭಿವೃದ್ಧಿಪಡಿಸಲಾಗಿದೆ ಎಂದು ಹೆಲ್ತ್ ಪ್ರೊಮೋಷನ್ ಫೌಂಡೇಷನ್ ಸಂಸ್ಥೆ ಹೇಳಿಕೊಂಡಿದೆ.

ಹೆಲ್ತ್ ಪ್ರೊಮೋಷನ್ ಫೌಂಡೇಷನ್ ಈ ವಿಶಿಷ್ಟ ವಿನ್ಯಾಸದ ತಟ್ಟೆಗೆ ಇದೀಗ ವ್ಯಾಪಕ ಬೇಡಿಕೆ ಸೃಷ್ಟಿಯಾಗಿದ್ದು, ಹೆಲ್ತ್ ಫೌಂಡೇಷನ್ ನ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com