ನವದೆಹಲಿ: ಭಾರತೀಯ ಸೇನೆಯ ತಂತ್ರಗಾರಿಕೆಯನ್ನು ಗೂಢಾಚಾರ ಮಾಡುವುದಕ್ಕಾಗಿ ಪಾಕಿಸ್ತಾನ ಅಪ್ಲಿಕೇಷನ್‌ಗಳ ಸಹಾಯವನ್ನು ಪಡೆದಿತ್ತು ಎಂಬುದು ವರದಿಯಾಗಿದೆ. ಸೇನೆಯ ಚಲನವಲನ ಮತ್ತು ಹಿರಿಯ ಅಧಿಕಾರಿಗಳ ವಿಷಯಗಳನ್ನು ಕದಿಯುವುದಕ್ಕಾಗಿ ಪಾಕ್ ಸ್ಮೆಶ್ ಆ್ಯಪ್ ಎಂಬ ಸ್ಪೈ ಆ್ಯಪ್‌ನ ಸಹಾಯ ಪಡೆದಿತ್ತು ಎಂದು ದೇಶೀಯ ಸುದ್ದಿ ಮಾಧ್ಯಮವೊಂದು ನಡೆಸಿದ ತನಿಖಾ ವರದಿ ಬಹಿರಂಗ ಪಡಿಸಿತ್ತು.
ಪಾಕಿಸ್ತಾನದ ರಹಸ್ಯ ಮಾಹಿತಿ ದಳಗಳು ಈ ಅಪ್ಲಿಕೇಶನ್ ಬಳಸಿರುವುದಾಗಿ ಮಾಹಿತಿ ಸಿಕ್ಕಿದೆ. ಭಾರತೀಯ ಸೈನಿಕರಿಂದ ಮಾಹಿತಿಗಳನ್ನು ಸೋರಿಕೆ ಮಾಡುವುದಕ್ಕಾಗಿ ಈ ಆ್ಯಪ್‌ನ್ನು ಬಳಸಲಾಗಿತ್ತು. ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್, ಲ್ಯಾಪ್‌ಟಾಪ್, ಕಂಪ್ಯೂಟರ್‌ನ್ನು ಗುರಿಯಾಗಿರಿಸಿ ರಹಸ್ಯಗಳ ಸೋರಿಕೆ ಮಾಡಲಾಗಿತ್ತು.
ಸೈನಿಕರ ಚಲನವಲನ ಮತ್ತು ಹೊರ ರಾಜ್ಯದ ಉಗ್ರರ ಯೋಜನೆಗಳನ್ನೆಲ್ಲಾ ಅರ್ಥೈಸಿಕೊಳ್ಳುವುದಕ್ಕೆ ಪಾಕ್ ಟೆಕಿಗಳಿಗೆ ಈ ಆ್ಯಪ್‌ನ ಸಹಾಯದಿಂದ ಸಾಧ್ಯವಾಗಿತ್ತು. ಈ ಆ್ಯಪ್ ಸ್ಮಾರ್ಟ್‌ಫೋನ್ ಗೆ ಇನ್ ಸ್ಟಾಲ್ ಮಾಡಿದ್ದರೆ ಮೂರನೇ ವ್ಯಕ್ತಿಗೆ ಅಲ್ಲಿಂದ ವಿಷಯ ಸೋರಿಕೆ ಮಾಡುವುದು ತುಂಬಾ ಸುಲಭ. ಫೋನ್ ಲಾಗ್ಸ್, ಟೆಕ್ಸ್ಟ್ ಸಂದೇಶ, ಫೋಟೋ ಯಾವುದೇ ವಿಷಯಗಳನ್ನು ಸೋರಿಕೆ ಮಾಡಲು ಶಕ್ತವಾಗಿರುವ ಸ್ಪೈವೇರ್ ಆಗಿದೆ ಸ್ಮೆಶ್ ಆ್ಯಪ್.
ಜರ್ಮನಿಯಲ್ಲಿ ಹೋಸ್ಟ್ ಮಾಡಿದ ಸರ್ವರ್ ಮೂಲಕ ಈ ರಹಸ್ಯಗಳು ಸೋರಿಕೆಯಾಗಿದ್ದು, ಕರಾಚಿಯ ಟೆಕಿಯೊಬ್ಬರು ಈ ಆ್ಯಪ್ ಮೂಲಕ ಸಿಕ್ಕಿದ ಮಾಹಿತಿಗಳನ್ನು ಸಂಬಂಧಪಟ್ಟವರಿಗೆ ರವಾನಿಸಿದ್ದಾರೆ. 2016 ಜನವರಿಯಲ್ಲಿ ಈ ಆ್ಯಪ್ ನ ಸಹಾಯದಿಂದಲೇ ಪಠಾಣ್‌ಕೋಟ್ ವಾಯುನೆಲೆಯ ಮೇಲೆ ಉಗ್ರರು ದಾಳಿ ಮಾಡಿದ್ದರು. ಆದಾಗ್ಯೂ ಸೇನೆಯ ತಂತ್ರಗಾರಿಕೆಗಳೆಲ್ಲಾ ಈ ಆ್ಯಪ್ ಮೂಲಕವೇ ಸೋರಿಕೆಯಾಗುತ್ತಿತ್ತು ಎಂದು ಹೇಳಲಾಗಿದೆ.
ಏತನ್ಮಧ್ಯೆ, ಈ ಆ್ಯಪ್ ನನ್ನು ಹಲವಾರು ಮಂದಿ ರಿಪೋರ್ಟ್ ಮಾಡಿದ್ದರಿಂದ ಸ್ಮೆಶ್ ಆ್ಯಪ್‌ನ್ನು ಗೂಗಲ್ ತಮ್ಮ ಪ್ಲೇಸ್ಟೋರ್ ನಿಂದ ತೆಗೆದು ಹಾಕಿದೆ