ಬಳಕೆದಾರರಿಗೆ ಮೊಬೈಲ್ ಲೈವ್ ಸ್ಟ್ರೀಮಿಂಗ್ ಅವಕಾಶ ಕಲ್ಪಿಸಿದ ಯೂಟ್ಯೂಬ್

ಕನಿಷ್ಠ ೧೦,೦೦೦ ಜನ ಅನುಸರಿಸುವ ಬಳಕೆದಾರರಿಗೆ ಯೂಟ್ಯೂಬ್ ಈಗ ಮೊಬೈಲ್ ಲೈವ್ ಸ್ಟ್ರೀಮಿಂಗ್ ಅವಕಾಶಕ್ಕೆ ಅನುವು ಮಾಡಿಕೊಡತ್ತಿದ್ದು, ವಿಡಿಯೋ ಕಂಟೆಂಟ್ ಸೃಷ್ಟಿಕರ್ತರು ಇನ್ನು ಮುಂದೆ ತಮ್ಮ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ನವದೆಹಲಿ: ಕನಿಷ್ಠ ೧೦,೦೦೦ ಜನ ಅನುಸರಿಸುವ ಬಳಕೆದಾರರಿಗೆ ಯೂಟ್ಯೂಬ್ ಈಗ ಮೊಬೈಲ್ ಲೈವ್ ಸ್ಟ್ರೀಮಿಂಗ್ ಅವಕಾಶಕ್ಕೆ ಅನುವು ಮಾಡಿಕೊಡತ್ತಿದ್ದು, ವಿಡಿಯೋ ಕಂಟೆಂಟ್ ಸೃಷ್ಟಿಕರ್ತರು ಇನ್ನು ಮುಂದೆ ತಮ್ಮ ವಿಡಿಯೋಗಳನ್ನು ನೇರಪ್ರಸಾರ ಮಾಡಬಹುದಾಗಿದೆ. 
ದ ಯಂಗ್ ಟರ್ಕ್ಸ್, ಎಐಬಿ, ಅಲೆಕ್ಸ್ ವಸ್ಸಾಬಿ ಹೀಗೆ ಕನಿಷ್ಠ ೧೦ ಸಾವಿರ ಜನರು ಫಾಲೋ ಮಾಡುವ ಬಳಕೆದಾರರು ಇನ್ನುಮುಂದೆ ಅವರ ವಿಡಿಯೊಗಳನ್ನು ಲೈವ್ ಸ್ಟ್ರೀಮ್ ಮಾಡುವ ಅವಕಾಶ ಪಡೆಯಲಿದ್ದಾರೆ. 
ಈ ಫೀಚರ್ ನಂತರದ ದಿನಗಳಲ್ಲಿ ಎಲ್ಲರಿಗು ಲಭ್ಯವಾಗಲಿದೆ ಎಂದು ಸಂಸ್ಥೆ ತಿಳಿಸಿದೆ. "ಸಂಸ್ಥೆಯ ಮೊಬೈಲ್ ಆಪ್ ಮೂಲಕ ಈ ಫೀಚರ್ ಅನ್ನು ಪಡೆಯಬಹುದಾಗಿದ್ದು, ಇದರ ಮೂಲಕ ಹೊರಹೊಮ್ಮುವ ವಿಡಿಯೋಗಳು ಇತರ ಯುಟ್ಯೂಬ್ ವಿಡಿಯೋಗಳಂತೆ ಎಲ್ಲ ಸಾಮಾನ್ಯ ಗುಣಲಕ್ಷಣಗಳನ್ನು ಹೊಂದಿರಲಿದೆ" ಎಂದು ಸಂಸ್ಥೆ ತಿಳಿಸಿದೆ. 
'ಸೂಪರ್ ಚಾಟ್' ಎಂಬ ಹಣಗಳಿಸುವ ಟೂಲ್ ಮೂಲಕ ಈ ಲೈವ್ ಸ್ಟ್ರೀಮಿಂಗ್ ವಿಡಿಯೋಗಳಿಂದ ೨೦ ದೇಶಗಳ ಈ ವಿಡಿಯೋ ಸೃಷ್ಟಿಕರ್ತರು ಲಾಭ ಕೂಡ ಪಡೆಯಬಹುದಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com