ಲಂಡನ್: ಯುರೋಪ್ ಮತ್ತು ಚೀನಾ ಸೇರಿ ಚಂದ್ರನ ಮೇಲೆ ಗ್ರಾಮವೊಂದನ್ನು ನಿರ್ಮಿಸುವ ಮಹತ್ವದ ಯೋಜನೆಯೊಂದನ್ನು ರೂಪಿಸುತ್ತಿವೆ.
ಮಂಗಳಗ್ರಹ ಸೇರಿದಂತೆ ಬಾಹ್ಯಾಕಾಶಕ್ಕೆ ಗಗನನೌಕೆಗಳನ್ನು ರವಾನಿಸಲು ಅಥವಾ ಅಂತರಿಕ್ಷ ಪ್ರವಾಸ ಕೈಗೊಳ್ಳಲು ಹಾಗೂ ಚಂದಿರನ ಅಂಗಳದಲ್ಲಿ ಗಣಿಗಾರಿಕೆ ಇತ್ಯಾದಿ ಉದ್ದೇಶಗಳಿಗೆ ಈ ವ್ಯೂಮ ಗ್ರಾಮವನ್ನು ಬಳಸಬಹುದಾಗಿದೆ.
ಯುರೋಪ್ ಮತ್ತು ಚೀನಾದ ಬಾಹ್ಯಾಕಾಶ ಪ್ರತಿನಿಧಿಗಳು ಒಟ್ಟಾಗಿ ಚಂದ್ರನಲ್ಲಿ ನೆಲೆಯೊಂದನ್ನು ಸ್ಥಾಪಿಸುವ ಬಗ್ಗೆ ಮತ್ತು ಸಾಧ್ಯವಿರಬಹುದಾದ ಇತರ ಯೋಜನೆಗಳ ಬಗ್ಗೆ ಜಂಟಿಯಾಗಿ ಯಾವ ರೀತಿ ಪರಸ್ಪರ ಸಹಕಾರ ನೀಡಬಹುದು ಎಂದು ಚರ್ಚಿಸಿದ್ದಾರೆ.
ಅತ್ಯಂತ ಮಹತ್ವಾಕಾಂಕ್ಷೆಯ ಚಂದ್ರಯಾನ ಮತ್ತು ಗ್ರಾಮ ಸ್ಥಾಪನೆ ಯೋಜನೆ ಬಗ್ಗೆ ಯುರೋಪ್ ಮತ್ತು ಚೀನಾದಲ್ಲಿ ಈಗಾಗಲೇ ಮೊದಲ ಹಂತದ ಸಿದ್ಧತೆಗಳು ನಡೆದಿದೆ.