ವಿಶ್ವದ ಅತ್ಯಂತ ಹಗುರ ಮತ್ತು ಚಿಕ್ಕ ಸ್ಯಾಟಲೈಟ್ ತಯಾರಿಸಿದ 18ರ ವಿದ್ಯಾರ್ಥಿ!

ಭಾರತದ ತಮಿಳುನಾಡು ಮೂಲದ ಬಾಲಕನೋರ್ವ ಇಡೀ ವಿಶ್ವವೇ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತಹ ಸಾಧನೆ ಮಾಡಿದ್ದು, ವಿಶ್ವದ ಅತ್ಯಂತ ಹಗುರವಾದ ಸ್ಯಾಟಲೈಟ್ ನಿರ್ಮಾಣ ಮಾಡಿದ್ದಾನೆ.
ಹಗುರ ಉಪಗ್ರಹದೊಂದಿಗೆ ರಿಫಾತ್
ಹಗುರ ಉಪಗ್ರಹದೊಂದಿಗೆ ರಿಫಾತ್
Updated on: 

ಚೆನ್ನೈ: ಭಾರತದ ತಮಿಳುನಾಡು ಮೂಲದ ಬಾಲಕನೋರ್ವ ಇಡೀ ವಿಶ್ವವೇ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತಹ ಸಾಧನೆ ಮಾಡಿದ್ದು, ವಿಶ್ವದ ಅತ್ಯಂತ ಹಗುರವಾದ ಸ್ಯಾಟಲೈಟ್ ನಿರ್ಮಾಣ ಮಾಡಿದ್ದಾನೆ.

ತಮಿಳುನಾಡಿನ ಪಲ್ಲಪಟ್ಟಿ ನಿವಾಸಿಯಾದ 18 ವರ್ಷ ವಯಸ್ಸಿನ ವಿದ್ಯಾರ್ಥಿ ರಿಫಾತ್ ಶಾರೂಕ್ ಕೇವಲ 64 ಗ್ರಾಂ ತೂಕದ ಅತ್ಯಂತ ಹಗುರವಾದ ಉಪಗ್ರಹವನ್ನು ನಿರ್ಮಿಸಿದ್ದಾನೆ. ಈ ಹಗುರ ಉಪಗ್ರಹಕ್ಕೆ "ಕಲಾಂಸ್ಯಾಟ್" ಎಂದು  ನಾಮಕರಣ ಮಾಡಲಾಗಿದೆ. ವಿಶೇಷ ವೆಂದರೆ ಬಾಲಕನ ಈ ಸಾಧನೆಗೆ ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾ ಹಾಗೂ ಐ ಡೂಡಲ್ ಲರ್ನಿಂಗ್ ಸಂಸ್ಥೆ ಕೈ ಜೋಡಿಸಿದ್ದು, ಇದೇ ಜೂನ್ 21ರಂದು ಈ ಅತ್ಯಂತ ಚಿಕ್ಕ ಹಾಗೂ  ಹಗುರವಾದ ಉಪಗ್ರಹ ನಭಕ್ಕೆ ಜಿಗಿಯಲಿದೆ. ಜೂನ್ 21ರಂದು ವಲಾಪ್ಸ್ ಐಲ್ಯಾಂಡ್ ನಲ್ಲಿರುವ ನಾಸಾದ ಉಡಾವಣಾ ಕೇಂದ್ರದಿಂದ "ಕಲಾಂ ಸ್ಯಾಟ್" ಉಡಾವಣೆಯಾಗಲಿದೆ.

ಕಲಾಂಸ್ಯಾಟ್‌ ಮಿಷನ್‌ ನ ಒಟ್ಟು ಅವಧಿ 240 ನಿಮಿಷಗಳಾಗಿದ್ದು, ಉಪಗ್ರಹವು ಉಪಕಕ್ಷೆಯಲ್ಲಿ 12 ನಿಮಿಷಗಳ ವರೆಗೂ ಕಾರ್ಯನಿರ್ವಹಿಸಲಿದೆ. ಕಾರ್ಬನ್‌ ಫೈಬರ್‌ 3ಡಿ ಪ್ರಿಂಟ್‌ ಮೂಲಕ ರೂಪಿಸಲಾಗಿರುವ ಉಪಗ್ರಹದ  ಕಾರ್ಯನಿರ್ವಹಣಾ ಸಾಮರ್ಥ್ಯವನ್ನು ಪರೀಕ್ಷಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ಪಲ್ಲಪಟ್ಟಿಯ ರಿಫತ್‌ ಹೇಳಿದ್ದಾನೆ. ನಾಸಾ ಮತ್ತು ಐ ಡೂಡಲ್‌ ಲರ್ನಿಂಗ್‌ ಸಂಸ್ಥೆಗಳ ‘ಕ್ಯೂಬ್ಸ್‌ ಇನ್‌ ಸ್ಪೇಸ್‌’ ಸ್ಪರ್ಧೆಯ ಮೂಲಕ ರಿಫತ್‌  ಅವರ 64 ಗ್ರಾಂ ಉಪಗ್ರಹ ಆಯ್ಕೆಯಾಗಿದೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com