ಶೀಘ್ರವೇ ಬೆಂಗಳೂರಿನಲ್ಲಿ "ಆಪಲ್" ತಯಾರಿಕೆ

ಬಹುನಿರೀಕ್ಷಿತ ಆಪಲ್ ಫೋನ್ ತಯಾರಿಕೆ ಯೋಜನೆ ಜರಿಗೆ ಬರುತ್ತಿದ್ದು, ಬೆಂಗಳೂರಿನಲ್ಲಿ ಶೀಘ್ರವೇ ಐಫೋನ್ ಎಸ್ಇ ತಯಾರಿಕೆ ಪ್ರಾರಂಭವಾಗಲಿದೆ.
ಆಪಲ್ ಐಫೋನ್
ಆಪಲ್ ಐಫೋನ್
ಬೆಂಗಳೂರು: ಬಹುನಿರೀಕ್ಷಿತ ಆಪಲ್ ಫೋನ್ ತಯಾರಿಕೆ ಯೋಜನೆ ಜರಿಗೆ ಬರುತ್ತಿದ್ದು, ಬೆಂಗಳೂರಿನಲ್ಲಿ ಶೀಘ್ರವೇ ಐಫೋನ್ ಎಸ್ಇ ತಯಾರಿಕೆ ಪ್ರಾರಂಭವಾಗಲಿದೆ. 
ರಾಜ್ಯ ಹಾಗೂ ಕೇಂದ್ರ ಮಟ್ಟದಲ್ಲಿ ಸರಣಿ ಸಭೆಗಳು ನಡೆದ ಬಳಿಕ ಐಫೋನ್ ಎಸ್ಇ ತಯಾರಿಕೆ ಬೆಂಗಳೂರಿನಲ್ಲಿ ಪ್ರಾರಂಭವಾಗುತ್ತಿದೆ. ಫೆಬ್ರವರಿಯಲ್ಲಿ ಈ ಬಗ್ಗೆ ಹೇಳಿಕೆ ನೀಡಿದ್ದ ಐಟಿ ಹಾಗೂ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಏಪ್ರಿಲ್ ತಿಂಗಳಾಂತ್ಯಕ್ಕೆ ಐಫೋನ್ ತಯಾರಿಕೆ ಪ್ರಾರಂಭವಾಗಲಿದೆ ಎಂದಿದ್ದರು. 
ಆಪಲ್ ಐ ಫೋನ್ ತಯಾರಿಗೆ ನಮ್ಮ ಸರ್ಕಾರ ಸಂಪೂರ್ಣ ಬೆಂಬಲ ನೀಡುತ್ತದೆ. ಆಪಲ್ ತಯಾರಿಕೆ ಯೋಜನೆಯನ್ನು ಪಡೆಯಲು ರಾಜ್ಯಗಳ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಆದರೆ ಆಪಲ್ ಸಂಸ್ಥೆ ಕರ್ನಾಟಕವನ್ನು ಆಯ್ಕೆ ಮಾಡಿರುವುದು ರಾಜ್ಯದ ಹೂಡಿಕೆ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸಿದೆ, ಆಪಲ್ ನ ಯೋಜನೆ ಉದ್ಯೋಗಾವಕಾಶಗಳನ್ನು ಹೆಚ್ಚಿಸಲಿದ್ದು, ಹೊಸ ಸಂಶೋಧನೆಗೆ ದಾರಿ ಮಾಡಿಕೊಡಲಿದೆ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಸಚಿವ ಆರ್ ವಿ ದೇಶಪಾಂಡೆ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com