ಗ್ರೂಪ್ ಅಡ್ಮಿನ್ ಗಳಿಗೆ ಮತ್ತಷ್ಟು ಅಧಿಕಾರ ನೀಡಲಿರುವ ವಾಟ್ಸ್ ಆಪ್

ವಾಟ್ಸ್ ಆಪ್ ಗ್ರೂಪ್ ಅಡ್ಮಿನ್ ಗಳಿಗೆ ಮತ್ತಷ್ಟು ಅಧಿಕಾರ ನೀಡಲು ವಾಟ್ಸ್ ಆಪ್ ಸಂಸ್ಥೆ ಮುಂದಾಗಿದ್ದು, ಗ್ರೂಪ್ ನಲ್ಲಿರುವ ಇತರರು ಗ್ರೂಪ್ ನ ವಿಷಯವನ್ನು(Subject), ಐಕಾನ್ ಗಳನ್ನು ಬದಲಾವಣೆ ಮಾಡಿದರೆ ಅದನ್ನು...
ವಾಟ್ಸ್ ಆಪ್
ವಾಟ್ಸ್ ಆಪ್
Updated on
ಸ್ಯಾನ್ ಫ್ರಾನ್ಸಿಸ್ಕೋ: ವಾಟ್ಸ್ ಆಪ್ ಗ್ರೂಪ್ ಅಡ್ಮಿನ್ ಗಳಿಗೆ ಮತ್ತಷ್ಟು ಅಧಿಕಾರ ನೀಡಲು ವಾಟ್ಸ್ ಆಪ್ ಸಂಸ್ಥೆ ಮುಂದಾಗಿದ್ದು, ಗ್ರೂಪ್ ನಲ್ಲಿರುವ ಇತರರು ಗ್ರೂಪ್ ನ ವಿಷಯವನ್ನು(Subject), ಐಕಾನ್ ಗಳನ್ನು ಬದಲಾವಣೆ ಮಾಡಿದರೆ ಅದನ್ನು ಆಯ್ಕೆ ಮಾಡುವ ವೈಶಿಷ್ಟ್ಯ ಲಭ್ಯವಾಗಲಿದೆ. 
ಬೀಟಾ ವರ್ಷನ್ ನಲ್ಲಿ ಈ ಆಯ್ಕೆಯನ್ನು ಪರಿಶೀಲನೆಗೊಳಪಡಿಸಲಾಗುತ್ತಿದ್ದು, ಗ್ರೂಪ್ ಮ್ಯಾನೇಜ್ಮೆಂಟ್ ಸುಧಾರಣೆಗೂ ಹೆಚ್ಚು ಒತ್ತು ನೀಡಲಿದೆ, ಗ್ರೂಪ್ ಆಡ್ಮಿನ್ ಗಳು ಗ್ರೂಪ್ ಕ್ರಿಯೇಟರ್ ಗಳನ್ನು ಡಿಲೀಟ್ ಮಾಡುವುದನ್ನು ತಡೆಯುವ ಸೌಲಭ್ಯವೂ ಇರಲಿದೆಯಂತೆ. 
ಇನ್ನು ಬಹು ನಿರೀಕ್ಷಿತ ಅನ್ ಸೆಂಡ್ ಆಯ್ಕೆಯೂ ಹೊಸ ಆವೃತ್ತಿಯಲ್ಲಿ ಲಭ್ಯವಾಗಲಿದ್ದು, ಅಂತಿಮ ಹಂತದ ಪರೀಕ್ಷೆ ನಡೆಯುತ್ತಿದೆ .

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com