ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಚಂದ್ರಯಾನ-2 ನ್ನು 2019 ರ ವರ್ಷಾರಂಭದಲ್ಲಿ ಉಡಾವಣೆ ಮಾಡುವ ಸಾಧ್ಯತೆಗಳಿವೆ.
ಜನವರಿ 3 ಅಥವಾ ಫೆ.16 ರಂದು ಚಂದ್ರಯಾನ-2 ನ್ನು ಉಡಾವಣೆ ಮಾಡಲಾಗುವುದು ಎಂದು ಇಸ್ರೋ ಅಧ್ಯಕ್ಷ ಕೆ ಶಿವನ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಚಂದ್ರಯಾನ-2 ಮೂಲಕ ಚಂದ್ರನ ದಕ್ಷಿಣ ದೃವ ಅಧ್ಯಯನಕ್ಕಾಗಿ ಇದೇ ಮೊದಲ ಬಾರಿಗೆ ಬಾಹ್ಯಾಕಾಶನೌಕೆಯೊಂದನ್ನು ಕಳಿಸುವ ಹೆಗ್ಗಳಿಗೆ ಭಾರತದ್ದಾಗಲಿದೆ.
ಚಂದ್ರಯಾನ-1 ನ್ನು ಅಕ್ಟೋಬರ್ 2008 ರಲ್ಲಿ ಉಡಾವಣೆ ಮಾಡಲಾಗಿತ್ತು. ಚಂದ್ರಯಾನ-2 ರ ಉಡಾವಣೆ ಈ ವರ್ಷದ ಏಪ್ರಿಲ್ ನಲ್ಲಿ ನಿಗದಿಯಾಗಿತ್ತು.