ಏಪ್ರಿಲ್‌ನಲ್ಲಿ ಚಂದ್ರಯಾನ-2 ಉಡಾವಣೆ; ಚಂದ್ರನ ದಕ್ಷಿಣ ಧ್ರುವದತ್ತ ಚಿತ್ತ: ಜೀತೇಂದ್ರ ಸಿಂಗ್

ಏಪ್ರಿಲ್ ನಲ್ಲಿ ಇಸ್ರೋದ ಮಹತ್ವಕಾಂಕ್ಷೀಯ ಚಂದ್ರಯಾನ-2 ಉಪಗ್ರಹ ಉಡಾವಣೆ ಮಾಡುವ ಸಾಧ್ಯತೆ ಇದ್ದು ಚಂದ್ರನ ದಕ್ಷಿಣ ಧ್ರುವದತ್ತ ಉಪಗ್ರಹ ಸುತ್ತು ಹಾಕಲಿದೆ...
ಚಂದ್ರಯಾನ-2
ಚಂದ್ರಯಾನ-2
Updated on
ನವದೆಹಲಿ: ಏಪ್ರಿಲ್ ನಲ್ಲಿ ಇಸ್ರೋದ ಮಹತ್ವಕಾಂಕ್ಷೀಯ ಚಂದ್ರಯಾನ-2 ಉಪಗ್ರಹ ಉಡಾವಣೆ ಮಾಡುವ ಸಾಧ್ಯತೆ ಇದ್ದು ಚಂದ್ರನ ದಕ್ಷಿಣ ಧ್ರುವದತ್ತ ಉಪಗ್ರಹ ಸುತ್ತು ಹಾಕಲಿದೆ ಎಂದು ಬಾಹ್ಯಾಕಾಶ ಇಲಾಖೆ ಅಧಿಕಾರಿ ಜೀತೇಂದ್ರ ಸಿಂಗ್ ತಿಳಿಸಿದ್ದಾರೆ. 
ಭಾರತದ ಚಂದ್ರಯಾನ-2 ಯೋಜನೆಗೆ ಸುಮಾರು 800 ಕೋಟಿ ರುಪಾಯಿ ವೆಚ್ಚವಾಗಲಿದೆ. ಇನ್ನೂ ಶೋಧಿಸದ ಚಂದ್ರನ ದಕ್ಷಿಣ ಧ್ರುವದಲ್ಲಿ ರೋವರ್ ಅನ್ನು ಇಳಿಸಲಾಗುವುದು ಎಂದು ಇಸ್ರೋ ನೂತನ ಅಧ್ಯಕ್ಷ ಕೆ ಶಿವನ್ ತಿಳಿಸಿದ್ದಾರೆ. 
ಚಂದ್ರಯಾನ 1ರ ಮೂಲಕ ಚಂದ್ರನಲ್ಲಿ ನೀರು ಇರುವುದನ್ನು ಇಸ್ರೋ ಪತ್ತೆಹಚ್ಚಿತ್ತು. ಇನ್ನು ಚಂದ್ರಯಾನ-2 ಯೋಜನೆಯೂ ಇದರ ವಿಸ್ತರಣೆಯನ್ನು ಹೊಂದಿದ್ದು ಚಂದ್ರನ ಮೇಲೆ ಮನುಷ್ಯನನ್ನು ಇಳಿಸುವುದು ಒಳ್ಳೆಯದ್ದು ಎಂದು ಪರೀಕ್ಷಿಸಲಿದೆ ಎಂದು ಜೀತೇಂದ್ರ ಸಿಂಗ್ ತಿಳಿಸಿದ್ದಾರೆ. 
ಯಾವುದೇ ಖಗೋಳದ ಮೇಲೆ ರೋವರ್ ಅನ್ನು ಇಳಿಸಲು ಚಂದ್ರಯಾನ-2 ಇಸ್ರೋದ ಮೊದಲ ಅಂತರ-ಗ್ರಹದ ಉದ್ದೇಶವಾಗಿದೆ. ಏಪ್ರಿಲ್ ನಲ್ಲಿ ಚಂದ್ರಯಾನ-2 ಉಡಾವಣೆ ಮಾಡುವ ಯೋಜನೆಯನ್ನು ಇಸ್ರೋ ಹೊಂದಿದ್ದು ಏಪ್ರಿಲ್ ನಲ್ಲಿ ಉಡಾವಣೆ ಸಾಧ್ಯವಾಗದೇ ಹೋದರೆ ನವೆಂಬರ್ ನಲ್ಲಿ ಉಡಾವಣೆ ಮಾಡಲಾಗುವುದು ಎಂದು ಶಿವನ್ ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com