ಕರ್ನಾಟಕದ ವಿದ್ಯಾರ್ಥಿಗಳಿಂದ ಬ್ಲೂಟೂತ್ ಆಧಾರಿತ ರೂಟ್ ಗೈಡೆಡ್ ಹೆಲ್ಮೆಟ್ ಆವಿಷ್ಕಾರ!

ಕರ್ನಾಟಕದ ವಿದ್ಯಾರ್ಥಿಗಳ ಆವಿಷ್ಕಾರವೊಂದು ರಾಷ್ಟ್ರವ್ಯಾಪಿ ಸುದ್ದಿಗೆ ಗ್ರಾಸವಾಗಿದ್ದು, ವಿದ್ಯಾರ್ಥಿಗಳು ಬ್ಲೂಟೂತ್ ಆಧಾರಿತ ರೂಟ್ ಗೈಡೆಡ್ ಹೆಲ್ಮೆಟ್ ಅನ್ನು ಆವಿಷ್ಕರಿಸಿದ್ದಾರೆ.
ಬ್ಲೂಟೂತ್ ಆಧಾರಿತ ರೂಟ್ ಗೈಡೆಡ್ ಹೆಲ್ಮೆಟ್ ಆವಿಷ್ಕಾರಿಸಿದ ವಿದ್ಯಾರ್ಥಿಗಳು
ಬ್ಲೂಟೂತ್ ಆಧಾರಿತ ರೂಟ್ ಗೈಡೆಡ್ ಹೆಲ್ಮೆಟ್ ಆವಿಷ್ಕಾರಿಸಿದ ವಿದ್ಯಾರ್ಥಿಗಳು
Updated on: 
ಕಲಬುರ್ಗಿ: ಕರ್ನಾಟಕದ ವಿದ್ಯಾರ್ಥಿಗಳ ಆವಿಷ್ಕಾರವೊಂದು ರಾಷ್ಟ್ರವ್ಯಾಪಿ ಸುದ್ದಿಗೆ ಗ್ರಾಸವಾಗಿದ್ದು, ವಿದ್ಯಾರ್ಥಿಗಳು ಬ್ಲೂಟೂತ್ ಆಧಾರಿತ ರೂಟ್ ಗೈಡೆಡ್ ಹೆಲ್ಮೆಟ್ ಅನ್ನು ಆವಿಷ್ಕರಿಸಿದ್ದಾರೆ.
ಹೌದು.. ಕಲಬುರಗಿ ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿಗಳಾದ ಯೋಗೇಶ್ ಮತ್ತು ಅಭಿಜಿತ್ ಎಂಬ ವಿದ್ಯಾರ್ಥಿಗಳು ಈ ವಿಶಿಷ್ಟ ಹೆಲ್ಮೆಟ್ ಆವಿಷ್ಕರಿಸಿದ್ದು, ಹೆಲ್ಮೆಟ್ ಮೂಲಕ ಬ್ಲೂಟೂತ್ ಆಧಾರಿತ ರೂಟ್ ಮ್ಯಾಪ್ ಗೈಡ್  ಪಡೆಯಬಹುದಾಗಿದೆಯಂತೆ. ಈ ಬಗ್ಗೆ ಸ್ವತಃ ವಿದ್ಯಾರ್ಥಿಗಳೇ ಮಾಹಿತಿ ನೀಡಿದ್ದು, ಬೈಕ್ ಚಾಲಕ ತನ್ನ ಮೊಬೈಲ್ ನಲ್ಲಿರುವ ಬ್ಲೂಟೂತ್ ಆನ್ ಮಾಡಿ ಈ ಸೇವೆ ಪಡೆಯಬಹುದಾಗಿದೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.
ಈ ವಿಶಿಷ್ಟ ಹೆಲ್ಮೆಟ್ ನಲ್ಲಿ ಇನ್ ಬಿಲ್ಟ್ ಬ್ಲೂಟೂತ್ ಪೋರ್ಟ್ ಗಳಿದ್ದು, ಇದನ್ನು ಚಾರ್ಜಿಂಗ್ ಮಾಡಬಹುದಾಗಿದೆ. ಬ್ಲೂಟೂತ್ ಡಿವೈಸ್ ನಲ್ಲಿರುವ ಬ್ಯಾಟರಿ ಧೀರ್ಘಾವಧಿಯ ಸಾಮರ್ಥ್ಯಹೊಂದಿದ್ದು, ಬರೊಬ್ಬರಿ 6 ಗಂಟೆಗಳ ವರೆಗೂ  ಕಾರ್ಯ ನಿರ್ವಹಿಸಬಲ್ಲದಾಗಿದೆ. ಹೆಲ್ಮೆಂಟ್ ನಲ್ಲಿ ಕೂಲಿಂಗ್ ಶೀಲ್ಡ್ ಇದ್ದು. ನೈಟ್ ವಿಷನ್ ಮೋಡ್ ಅನ್ನು ಕೂಡ ಹೊಂದಿದೆಯಂತೆ. ಮೊಬೈಲ್ ನಲ್ಲಿನ ಬ್ಲೂಟೂತ್ ಆನ್ ಮಾಡಿ ವಾಯ್ಸ್ ಕಮಾಂಡ್ ಮೂಲಕ ದಾರಿ ಮಾಹಿತಿ  ಪಡೆಯಬಹುದಾಗಿದೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.
ಪ್ರಸ್ತುತ ಗೂಗಲ್ ಒಕೆ ಅ್ಯಪ್ ನಲ್ಲಿರುವಂತೆಯೇ ಈ ಡಿವೈಸ್ ಗೂ ವಾಯ್ಸ್ ಕಮಾಂಡ್ ನೀಡುವ ಮೂಲಕ ನಮಗೆ ಬೇಕಾದ ಮಾರ್ಗದ ಮಾಹಿತಿ ಪಡೆಯಬಹುದಾಗಿದೆ. ಹೊಸ ಹೊಸ ನಗರಗಳಿಗೆ ತೆರಳುವವರಿಗೆ ಈ ಬ್ಲೂಟೂತ್  ಆಧಾರಿತ ಹೆಲ್ಮೆಟ್ ತುಂಬಾ ಸಹಾಯಕಾರಿ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com