ವಿಶ್ವಾದ್ಯಂತ ಯೂಟ್ಯೂಬ್ ಸ್ಥಗಿತ, ಸಮಸ್ಯೆ ಸರಿಪಡಿಸಿದ್ದೇವೆ ಎಂದ ಸಂಸ್ಥೆ!

ಖ್ಯಾತ ವಿಡಿಯೋ ಜಾಲತಾಣ ಯೂಟ್ಯೂಬ್ ಮಂಗಳವಾರ ರಾತ್ರಿ ಸ್ಥಗಿತವಾಗಿತ್ತು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ವಾಷಿಂಗ್ಟನ್: ಖ್ಯಾತ ವಿಡಿಯೋ ಜಾಲತಾಣ ಯೂಟ್ಯೂಬ್ ಮಂಗಳವಾರ ರಾತ್ರಿ ಸ್ಥಗಿತವಾಗಿತ್ತು.
ವಿಶ್ವದ ಪ್ರಖ್ಯಾತ ಮತ್ತು ಬಹು ದೊಡ್ಡ ವಿಡಿಯೋ ಜಾಲ ಯ್ಯೂಟ್ಯೂಬ್​ನಲ್ಲಿ ಜಗತ್ತಿನಾದ್ಯಂತ ಮಂಗಳವಾರ ರಾತ್ರಿ ತಾಂತ್ರಿಕದೋಷ ಎದುರಿಸಿತ್ತು. ಹೀಗಾಗಿ ವಿಡಿಯೋ ಪ್ಲೇ ಮಾಡಲು ಮತ್ತು ಅಪ್ಲೋಡ್​ ಮಾಡಲು ಬಳಕೆದಾರರಿಗೆ ತೊಡಕುಂಟಾಗಿತ್ತು. ಯ್ಯೂಟ್ಯೂಬ್​ ತೆರೆದುಕೊಳ್ಳಲು ಸಮಸ್ಯೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಮತ್ತು ಎರರ್​ ಕೋಡ್​ ಕಾಣಿಸಿಕೊಳ್ಳುತ್ತಿದ್ದರಿಂದ ಜಗತ್ತಿನಾದ್ಯಂತ ಅಸಂಖ್ಯ ಬಳಕೆದಾರರು ಈ ಬಗ್ಗೆ ಯ್ಯೂಟ್ಯೂಬ್ ​ಗೆ ವರದಿ ಮಾಡಿದ್ದರು.
ಈ ಬಗ್ಗೆ ಬಳಕೆದಾರರಿಂದ ವರದಿ ಪಡೆದ ಕೂಡಲೇ ಎಚ್ಚೆತ್ತ ಸಂಸ್ಥೆ ವರದಿ ಮಾಡಿದ್ದಕ್ಕಾಗಿ ಧನ್ಯವಾದಗಳು. ಶೀಘ್ರ ಸಮಸ್ಯೆ ಸರಿಪಡಿಸುತ್ತೇವೆ ಎಂದು ಟ್ವೀಟ್ ಮಾಡಿದೆ. ಅಂತೆಯೇ  ಸತತ ಪ್ರಯತ್ನಗಳ ನಂತರ ಯ್ಯೂಟ್ಯೂಬ್​ ಸಮಸ್ಯೆಯನ್ನು ಬುಧವಾರ ಬೆಳಗ್ಗೆ 8 ಗಂಟೆ ಹೊತ್ತಿಗೆ ಸರಿಪಡಿಸಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com