ಬರೊಬ್ಬರಿ 2.2 ಬಿಲಿಯನ್ ಜನರು ಫೇಸ್ ಬುಕ್ ನಿಂದ ಲಾಗ್ ಔಟ್ ಆಗಿ ಮತ್ತೆ ಲಾಗ್ ಇನ್ ಆಗಬೇಕೆಂದು ತಜ್ಞರು ಸಲಹೆ ನೀಡಿದ್ದು, ಫೇಸ್ ಬುಕ್ ಆಪ್ ಬಳಕೆ ಮಾಡುವವರೂ ಲಾಗ್ ಔಟ್ ಆಗಿ ಲಾಗ್ ಇನ್ ಆದರೆ ಒಳಿತು ಎಂದು ಹೇಳಿದ್ದಾರೆ. ಭದ್ರತಾ ಲೋಪ ಸಂಭವಿಸಿರುವುದು ತಿಳಿಯುತ್ತಿದ್ದಂತೆಯೇ ಫೇಸ್ ಬುಕ್ 50 ಮಿಲಿಯನ್ ಖಾತೆಗಳ ಆಕ್ಸಿಸ್ ಟೋಕನ್ ನ್ನು ರಿಸೆಟ್ ಮಾಡಿದ್ದು, ಇನ್ನೂ 40 ಮಿಲಿಯನ್ ಖಾತೆಗಳ ಆಕ್ಸಿಸ್ ಟೋಕನ್ ನ್ನು ರಿಸೆಟ್ ಮಾಡಲು ಕ್ರಮ ಕೈಗೊಂಡಿದೆ.