ಚಂದ್ರಯಾನ-2 ಸೆರೆ ಹಿಡಿದ ಸುಂದರ ಭೂಮಿ ಚಿತ್ರಗಳು: ಇಸ್ರೋದಿಂದ ಬಿಡುಗಡೆ

ಚಂದ್ರಯಾನ-2ರಲ್ಲಿ ಅಳವಡಿಸಲಾಗಿರುವ ಎಲ್ -14 ಕ್ಯಾಮರಾದಿಂದ ಸೆರೆ ಹಿಡಿಯಲ್ಪ ಭೂಮಿಯ ಐದು ಚಿತ್ರಗಳನ್ನು ಇಸ್ರೋ ಟ್ವೀಟರ್ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಇಂದು ಹಂಚಿಕೊಂಡಿದೆ.
ಭೂಮಿಯ ಚಿತ್ರ
ಭೂಮಿಯ ಚಿತ್ರ
Updated on: 
ನವದೆಹಲಿ: ಚಂದ್ರಯಾನ-2ರಲ್ಲಿ ಅಳವಡಿಸಲಾಗಿರುವ ಎಲ್ -14 ಕ್ಯಾಮರಾದಿಂದ ಸೆರೆ ಹಿಡಿಯಲ್ಪ ಭೂಮಿಯ ಐದು ಚಿತ್ರಗಳನ್ನು ಇಸ್ರೋ ಟ್ವೀಟರ್ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಇಂದು  ಹಂಚಿಕೊಂಡಿದೆ.
ಬಾಹ್ಯಾಕಾಶದಿಂದ ಭೂಮಿಯಿಂದ ಸೆರೆಹಿಡಿಯಲ್ಪ ಚಿತ್ರಗಳನ್ನು ಟ್ವೀಟ್ ಮಾಡಿರುವ ಇಸ್ರೋ, ಚಂದ್ರಯಾನ-2 ಎಲ್ 14 ಕ್ಯಾಮರಾದಿಂದ ತೆಗೆಯಲಾಗಿರುವ ಸುಂದರವಾದ ಭೂಮಿಯ ಚಿತ್ರಗಳೆಂದು ತಿಳಿಸಿದೆ. 
ಭಾರತದ ಚಂದ್ರಯಾನ ಉಪಗ್ರಹ-2 ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ . ನಾಲ್ಕನೇ ಆರ್ಬಿಟರ್   ಯಶಸ್ವಿಯಾಗಿ ಕಾರ್ಯ ನಿರ್ವಹಿಸುವ ಮೂಲಕ ಪೋಟೋಗಳನ್ನು ಭೂಮಿಗೆ ರವಾನಿಸಿದೆ. ಐದನೇ ಆರ್ಬಿಟರ್ ಆಗಸ್ಟ್ 6 ರಂದು 2-30ರಿಂದ 3-30 ರ ನಡುವೆ ಕಾರ್ಯ ಆರಂಭಿಸಲಿದೆ  ಎಂದು ಇಸ್ರೋ ಹೇಳಿದೆ.
ಆರ್ಬಿಟರ್ , ಲ್ಯಾಂಡರ್, ವಿಕ್ರಮ್, ರೋವರ್ ಪರಿಕರಗಳನ್ನು ಹೊತ್ತ ಜಿಎಸ್ ಎಲ್ ವಿ ಮಾರ್ಕ್ -111 ವಾಹಕ ಜುಲೈ 22 ರಂದು ನಭದತ್ತ ಚಿಮ್ಮಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com