ಏಕಕಾಲಕ್ಕೆ 18 ತಬಲಾ ವಾದನ: ಗಿನ್ನೆಸ್ ರೆಕಾರ್ಡ್ ನಿರೀಕ್ಷೆಯಲ್ಲಿ ಆಂಧ್ರಪ್ರದೇಶ ಸಂಗೀತಗಾರ 

ಏಕಕಾಲಕ್ಕೆ 18 ತಬಲಾಗಳನ್ನು ನುಡಿಸುವ ವಿಡಿಯೋವನ್ನು ಅವರು ಗಿನ್ನೆಸ್ ರೆಕಾರ್ಡ್ಸ್ ಸಂಸ್ಥೆಗೆ ಕಳಿಸಿಕೊಟ್ಟಿದ್ದು ಫಲಿತಾಂಶಕ್ಕೆ ಕಾದಿದ್ದಾರೆ.
ಕೊಂಡಪಲ್ಲಿ ಚಿದಂಬರ ನಟರಾಜ
ಕೊಂಡಪಲ್ಲಿ ಚಿದಂಬರ ನಟರಾಜ

ಕಡಪ: ಈ ಆಧುನಿಕ ಯುಗದಲ್ಲೂ ಕುಟುಂಬದ ತಲೆಮಾರುಗಳ ಪರಂಪರೆಯನ್ನು ಉಳಿಸಿಕೊಂಡು, ಪೋಷಿಸಿಕೊಂಡು ಬರುತ್ತಿರುವ ಹಲವಾರು ಮಂದಿ ನಮ್ಮ ನಡುವೆ ಇದ್ದಾರೆ. ಅವರಲ್ಲೊಬ್ಬರು ಅಂಧ್ರಪ್ರದೇಶದ ಕೊಂಡಪಲ್ಲಿ ಚಿದಂಬರ ನಟರಾಜ.

ನಟರಾಜ ಅವರ ಜೀವನ ನಿರ್ವಹಣೆ ಸಂಗೀತದ ಮೇಲೆ ಅವಲಂಬಿತವಾಗಿದೆ. ಕಡಪ ಜಿಲ್ಲೆಯ ಮಿದುಕೂರ್ ಊರಿನವರಾದ ಅವರು ಓರ್ವ ಪ್ರತಿಭಾನ್ವಿತ ಮೃದಂಗ ಕಲಾವಿದ. ಹಲವು ರಾಜ್ಯಮಟ್ಟದ ಪ್ರಶಸ್ತಿಗಳಿಗೆ ಭಾಜನರಾದ ನಟರಾಜ ಅವರು ಇದೀಗ ನೂತನ ಸಾಧನೆ ಮಾಡುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ.

ಅವರು ಏಕಕಾಲಕ್ಕೆ 18 ತಬಲಾಗಳನ್ನು ನುಡಿಸುವ ವಿಡಿಯೋವನ್ನು ಗಿನ್ನೆಸ್ ರೆಕಾರ್ಡ್ಸ್ ಸಂಸ್ಥೆಗೆ ಕಳಿಸಿಕೊಡಲಾಗಿದ್ದು ಫಲಿತಾಂಶಕ್ಕೆ ಕಾದಿದ್ದಾರೆ. ಅವರು ಅಂದುಕೊಂಡಂತೆಯೇ ನಡೆದರೆ ಏಕಕಾಲಕ್ಕೆ ಅತಿ ಹೆಚ್ಚು ತಬಲಾ ನುಡಿಸಿದ ದಾಖಲೆಗೆ ನಟರಾಜ ಅವರು ಪಾತ್ರರಾಗಲಿದ್ದಾರೆ. 

ನಟರಾಜ ಅವರ ಕುಟುಂಬ ಸಂಗೀತ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಅವರ ತಾತ ಕೊಂಡಪಲ್ಲಿ ಭಿಕ್ಷಾಪತಿ ಹಾರ್ಮೋನಿಯಂ ವಾದಕರಾಗಿದ್ದರು. ನತರಾಜ ಅವರ ತಂದೆ ವೀರಭದ್ರಯ್ಯ ಸಂಗೀತದ ಜೊತೆಗೆ ಹರಿಕಥೆ, ಬುರ್ರಕಥೆಯಲ್ಲೂ ಪ್ರವೀಣರಾಗಿದ್ದರು. ಎಲ್ಲಕ್ಕಿಂತ ಅಚ್ಚರಿಯೆಂದರೆ ಅವರು ಯಕ್ಷಗಾನವನ್ನೂ ಕಲಿತಿದ್ದರು ಎನ್ನುವುದು. 

ಸಂಗೀತ ಪರಂಪರೆಯನ್ನು ಹೊಂದಿದ ಕುಟುಂಬದಿಂದ ಬಂದ ನಟರಾಜ ಅವರೂ ತಮ್ಮ ತಂದೆಯಂತೆ ಸಾಧನೆ ಮಾಡಬೇಕು ಎನ್ನುವ ಅಭಿಲಾಷೆ ಹೊಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com