ಅಮೆಜಾನ್ ಉದ್ಯೋಗದ ಕನಸು ನನಸಾಗಿಸಿಕೊಂಡ ಜಮ್ಮು-ಕಾಶ್ಮೀರದ ಇಂಜಿನಿಯರಿಂಗ್ ವಿದ್ಯಾರ್ಥಿ!

ಜಮ್ಮು ಮತ್ತು ಕಾಶ್ಮೀರ ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬರು ಅಮೆಜಾನ್ ನಲ್ಲಿ ಉದ್ಯೋಗ ಮಾಡಬೇಕೆಂಬ ಕನಸನ್ನು ನನಸು ಮಾಡಿಕೊಂಡಿದ್ದಾರೆ. 
ಕೈಸರ್ ಶಬ್ಬೀರ್
ಕೈಸರ್ ಶಬ್ಬೀರ್

ತುಮಕೂರು: ಜಮ್ಮು ಮತ್ತು ಕಾಶ್ಮೀರ ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬರು ಅಮೆಜಾನ್ ನಲ್ಲಿ ಉದ್ಯೋಗ ಮಾಡಬೇಕೆಂಬ ಕನಸನ್ನು ನನಸು ಮಾಡಿಕೊಂಡಿದ್ದಾರೆ. 

ಜಮ್ಮು ಮತ್ತು ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ಖಾನಾಬಾಲ್ ನಿವಾಸಿಯಾಗಿರುವ ಕೈಸರ್ ಶಬ್ಬೀರ್ ಅವರು ಅಮೆಜಾನ್ ನಲ್ಲಿ ಉದ್ಯೋಗ ಪಡೆದುಕೊಂಡಿದ್ದಾರೆ. 

ತುಮಕೂರಿನ ಸಿದ್ದಗಂಗಾ ಇನ್ಸ್'ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪದವಿ ಪಡೆದುಕೊಂಡ ಇವರು, 2020ರ ಡಿಸೆಂಬರ್ ತಿಂಗಳಲ್ಲಿ ಆನ್'ಲೈನ್ ನಲ್ಲಿ ನಡೆದ ಕ್ಯಾಂಪಸ್ ಸೆಲೆಕ್ಷನ್ ನಲ್ಲಿ ಪಾಲ್ಗೊಂಡಿದ್ದರು. ಇದೀಗ ಕೈಸರ್ ಅವರು ಅಮೆಜಾನ್ ನಲ್ಲಿ ಕ್ಯಾಪ್ಟರ್ ತರಬೇತಿಯೊಂದಿಗೆ ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಎಂಜಿನಿಯರ್ ಆಗಿ ನೇಮಕಗೊಂಡಿದ್ದು, ಕಂಪನಿಯು ಕೈಸರ್ ಅವರಿಗೆ ವಾರ್ಷಿಕ ರೂ.31.97 ಲಕ್ಷ ವೇತನದ ಆಫರ್ ನೀಡಿದೆ. 

ಕ್ಯಾಂಪಸ್ ಸೆಲೆಕ್ಷನ್ ಮೂಲಕ ಸ್ಥಾನ ಪಡೆದ 700 ಬ್ಯಾಚುಲರ್ ಆಫ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಲ್ಲಿ ಇದು ಅತೀ ದೊಡ್ಡ ಮಟ್ಟದ ಉದ್ಯೋಗವೆಂದು ಹೇಳಲಾಗುತ್ತಿದೆ.

ಇಂಟರ್ನೆಟ್ ಸಮಸ್ಯೆ ಎದುರಾಗುವ ಆತಂಕವಿತ್ತು. ಆದರೆ, ಅಂತಹ ಯಾವುದೇ ಸಮಸ್ಯೆಗಳೂ ಎದುರಾಗಲಿಲ್ಲ. ಬಿಎಸ್ಎನ್ಎಲ್' ಫೈಬರ್ನೆಟ್ ಮನೆಯಲ್ಲಿದ್ದ ಕಾರಣ ಯಾವುದೇ ಸಮಸ್ಯೆಗಳು ಎದುರಾಗಲಿಲ್ಲ. ಸಂದರ್ಶನದ ವೇಳೆ ಸಮಸ್ಯೆಗಳು ಎದುರಾಗಿದ್ದರೂ ಕೂಡ ಸಂದರ್ಶನಕಾರರೂ ಮತ್ತೊಮ್ಮೆ ಸಂದರ್ಶನ ನಡೆಸುತ್ತಿದ್ದರು ಎಂಬ ವಿಶ್ವಾಸವಿತ್ತು. ಮೊಬೈಲ್ ನಲ್ಲಿ ಸೂಕ್ತ ಸಮಯದಲ್ಲಿ ನೆಟ್ ವರ್ಕ್ ಇದ್ದಿದ್ದರೆ, ನನ್ನ ಪ್ರತಿಭೆಯನ್ನು ಮತ್ತಷ್ಟು ಪ್ರದರ್ಶಿಸಬಹುದಿತ್ತು. ಕ್ಯಾಂಪಸ್ ಸೆಲೆಕ್ಷನ್ ಸಂದರ್ಭದಲ್ಲಿ ಬಿಎಸ್ಎನ್ಎಲ್ ನೆಟ್ವರ್ಕ್ ನನಗೆ ಅತ್ಯಂತ ಸಹಾಯ ಮಾಡಿದೆ ಎಂದು ಕೈಸರ್ ಅವರು ಹೇಳಿದ್ದಾರೆ. 

ಕ್ಯಾಂಪಸ್ ಸೆಲೆಕ್ಷನ್ ನಲ್ಲಿ ಆಯ್ಕೆಯಾದ ಬಳಿಕ ಮನೆಯಿಂದಲೇ ಕೆಲಸ ಮಾಡುತ್ತಿದ್ದೆ. ಇದೀಗ ಬೆಂಗಳೂರಿನ ಅಮೆಜಾನ್ ಕಚೇರಿಗೆ ತೆರಳಿ ನೌಕರಿಗೆ ಸೇರ್ಪಡೆಗೊಳ್ಳುತ್ತಿದ್ದೇನೆ. ವಿದೇಶಕ್ಕೆ ಹೋಗಬೇಕೆಂಬ ಯಾವುದೇ ಆಸೆಯೂ ಇಲ್ಲ. ಭವಿಷ್ಯದಲ್ಲಿ ಯುಪಿಎಸ್'ಸಿ ಪರೀಕ್ಷೆಯಲ್ಲಿ ತೇರ್ಗಡೆಗೊಂಡು, ದೇಶಕ್ಕಾಗಿ ಸೇವೆ ಸಲ್ಲಿಸುವ ಆಸೆಯಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com