ಇಶಾಂತ್‍ಗೆ ದಂಡ

ಶ್ರೀಲಂಕಾ ತಂಡದ ಮೊದಲ ಇನಿಂಗ್ಸ್ ವೇಳೆ ಲಾಹಿರು ತಿರಿಮಾನೆ ಹಾಗೂ ದಿನೇಶ್ ಚಾಂಡೀಮಾಲ್ ಅವರನ್ನು ರೇಗಿಸಲು ಯತ್ನಿಸಿದ ಕಾರಣಕ್ಕಾಗಿ ಇಶಾಂತ್ ಶರ್ಮಾ ಅವರಿಗೆ...
ಇಶಾಂತ್ ಶರ್ಮಾ (ಸಂಗ್ರಹ ಚಿತ್ರ)
ಇಶಾಂತ್ ಶರ್ಮಾ (ಸಂಗ್ರಹ ಚಿತ್ರ)
Updated on: 

ಕೊಲಂಬೊ: ಶ್ರೀಲಂಕಾ ತಂಡದ ಮೊದಲ ಇನಿಂಗ್ಸ್ ವೇಳೆ ಲಾಹಿರು ತಿರಿಮಾನೆ ಹಾಗೂ ದಿನೇಶ್ ಚಾಂಡೀಮಾಲ್ ಅವರನ್ನು ರೇಗಿಸಲು ಯತ್ನಿಸಿದ ಕಾರಣಕ್ಕಾಗಿ ಇಶಾಂತ್ ಶರ್ಮಾ ಅವರಿಗೆ  ದ್ವಿತೀಯ ಟೆಸ್ಟ್ ಪಂದ್ಯದ ಸಂಭಾವನೆಯಲ್ಲಿ ಶೇ. 65ರಷ್ಟು ಮೊತ್ತವನ್ನು ದಂಡವಾಗಿ ಪಾವತಿಸುವಂತೆ ಐಸಿಸಿ ಆದೇಶಿಸಿದೆ.

ಇನಿಂಗ್ಸ್ ನ 85ನೇ ಓವರ್‍ನಲ್ಲಿ ತಿರಿಮಾನೆ ಅವರ ವಿಕೆಟ್ ಪಡೆದ ಇಶಾಂಶ್, ತಕ್ಷಣವೇ ಅವರನ್ನು ರೇಗಿಸಿದರು. ಈ ಕಾರಣಕ್ಕಾಗಿ, ಇಶಾಂತ್ ಸಂಭಾವನೆಯಲ್ಲಿ ಶೇ. 16ರಷ್ಟು ದಂಡ ವಿಧಿಸಲಾಗಿದೆ. ಇದಾಗಿ ಮೂರು ಓವರ್ ನಂತರ ಚಾಂಡೀಮಾಲ್ ವಿಕೆಟ್ ಕಬಳಿಸಿದಾಗಲೂ ಇದೇ ರೀತಿ ಇಶಾಂತ್ ವರ್ತಿಸಿದ್ದಕ್ಕಾಗಿ ಅವರಿಗೆ ಶೇ. 50ರಷ್ಟು ದಂಡವನ್ನು (ಒಟ್ಟು ಶೇ. 65) ನೀಡುವಂತೆ ಐಸಿಸಿ ಆದೇಶಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com