ಕೊಲಂಬೋ: 111 ರನ್ ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾಗೆ ಆರಂಭಿಕ ಆಘಾತವಾಗಿದೆ. 21 ರನ್ ಗಳಿಗೆ ಪ್ರಮುಖ 3 ವಿಕೆಟ್ ಗಳನ್ನು ಕಳೆದುಕೊಂಡಿದೆ.
ಮೊದಲ ಇನ್ನಿಂಗ್ಸ್ ನಲ್ಲಿ ಶತಕ ಸಿಡಿಸಿದ್ದ ಚೇತೇಶ್ವರ ಪೂಜಾರ ಎರಡನೇ ಇನ್ನಿಂಗ್ಸ್ ನಲ್ಲಿ ಶೂನ್ಯಕ್ಕೆ ಔಟಾಗಿದ್ದಾರೆ. ಕನ್ನಡಿಗ ಕೆಎಲ್ ರಾಹುಲ್ 2, ಅಜಿಂಕ್ಯಾ ರಹಾನೆ 4 ರನ್ ಗಳಿಗೆ ಔಟಾಗಿದ್ದಾರೆ. ಸದ್ಯ ವಿರಾಟ್ ಕೊಹ್ಲಿ ಅಜೇಯ 1 ರನ್ ಹಾಗೂ ರೋಹಿತ್ ಶರ್ಮಾ 14 ರನ್ ಪೇರಿಸಿದ್ದಾರೆ.
ಶ್ರೀಲಂಕಾ ಪರ ಪ್ರದೀಪ್ 2, ಪ್ರಸಾದ್ 1 ವಿಕೆಟ್ ಪಡೆದಿದ್ದಾರೆ.
ಭಾರತಕ್ಕೆ 111ರನ್ ಗಳ ಇನ್ನಿಂಗ್ಸ್ ಮುನ್ನಡೆ
ಟೀಂ ಇಂಡಿಯಾ ವೇಗಿ ಇಶಾಂತ್ ಶರ್ಮಾ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಅತಿಥೇಯ ಶ್ರೀಲಂಕಾ ಮೊದಲ ಇನ್ನಿಂಗ್ಸ್ 201 ರನ್ ಗಳಿಗೆ ಆಲೌಟ್ ಆಗಿದ್ದು, ಭಾರತಕ್ಕೆ 111 ರನ್ ಗಳ ಇನ್ನಿಂಗ್ಸ್ಮುನ್ನಡೆ ದೊರೆತಿದೆ.
ಭಾರತ ತಂಡ ಚೇತೇಶ್ವರ ಪೂಜಾರ(ಅಜೇಯ 145 ರನ್) ದಾಖಲಿಸಿದ ಶತಕದ ನೆರವಿನಿಂದ ಮೊದಲ ಇನ್ನಿಂಗ್ಸ್ ನಲ್ಲಿ 312 ರನ್ ಕಲೆ ಹಾಕಿತ್ತು.
ಮೊದಲ ಇನ್ನಿಂಗ್ಸ್ ನಲ್ಲೇ ಶ್ರೀಲಂಕಾ ಕೇವಲ 201 ರನ್ ಗಳಿಗೆ ಆಲೌಟ್ ಆಗಿ ಹಿನ್ನಡೆ ಅನುಭವಿಸಿದೆ. ಲಂಕಾ ಪರ ಕುಶಲ್ ಪೆರೇರ 55 ರನ್ ಮತ್ತು ರಂಗನಾ ಹೇರಾತ್ 49 ರನ್ ದಾಖಲಿಸಿದ್ದು, ಬಿಟ್ಟರೆ ಉಳಿದ ಯಾವ ಆಟಗಾರನು ಹೆಚ್ಚು ಹೊತ್ತು ಕ್ರಿಸ್ ನಲ್ಲಿ ನಿಲ್ಲಲಿಲ್ಲ.
ಭಾರತದ ಪರ ಇಶಾಂತ್ ಶರ್ಮ 5, ಸ್ಟುವರ್ಡ್ ಬಿನ್ನಿ ಮತ್ತು ಅಮೀತ್ ಮಿಶ್ರ ತಲಾ 2, ಉಮೇಶ್ ಯಾದವ್ 1 ವಿಕೆಟ್ ಪಡೆದಿದ್ದಾರೆ.