

ದುಬೈ: ಭಾರತ ಮತ್ತು ಪಾಕಿಸ್ತಾನ ಡುವಣ ಗಡಿ ಸಮಸ್ಯೆ ಬಗೆಹರಿಯುವವರೆಗೂ ಭಾರತ ಮತ್ತು ಪಾಕಿಸ್ತಾನ ನಡುವಣ ಕ್ರಿಕೆಟ್ ಸರಣಿಯನ್ನು ಮುಂದೂಡಬೇಕು ಎಂದು ಪಾಕ್‍ನ ಮಾಜಿ ವೇಗಿ ಶೋಯಬ್ ಅಕ್ತರ್ ಅಭಿಪ್ರಾಯಪಟ್ಟಿದ್ದಾರೆ.
ಇದೇ ವರ್ಷಾಂತ್ಯದಲ್ಲಿ ಯುಎಇಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ 3 ಟೆಸ್ಟ್, 5 ಏಕದಿನ ಮತ್ತು 2 ಟಿ20 ಪಂದ್ಯಗಳ ಸರಣಿಯಾಡಲು ಯೋಜನೆ ರೂಪಿಸಲಾಗಿತ್ತು. ಆದರೆ ಎರಡು ದೇಶಗಳ ನಡುವಣ ಗಡಿ ಸಮಸ್ಯೆ ಹಾಗೂ ಉಗ್ರರ ದಾಳಿಯ ಕಾರಣದಿಂದ ಭಾರತ, ಪಾಕಿಸ್ತಾನ ವಿರುದ್ಧದ ಕ್ರಿಕೆಟ್ ಸರಣಿಯಾಡಲು ನಿರಾಕರಿಸುತ್ತಿದೆ.
ಕ್ರೀಡೆಯನ್ನು ರಾಜಕೀಯದಿಂದ ದೂರವಿಡಬೇಕೆಂದು ಪ್ರತಿಯೊಬ್ಬರೂ ಅರಿತಿದ್ದಾರೆ. ಆದರೆ, ಪ್ರಸಕ್ತ ಎರಡು ದೇಶಗಳ ನಡುವಣ ಗಡಿ ಸಮಸ್ಯೆಯ ನಡುವೆ ಈ ಸರಣಿ ಅಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.