ನವದೆಹಲಿ: ಟೀಂ ಇಂಡಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ರವೀಂದ್ರ ಜಡೇಜಾರ ಮಾರಕ ದಾಳಿಗೆ ದಕ್ಷಿಣ ಆಫ್ರಿಕಾ ಅಲ್ಪ ಮೊತ್ತಕ್ಕೆ ಪತನಗೊಂಡಿದೆ.
ದೆಹಲಿಯ ಫಿರೋಜ್ ಷಾ ಕೊಟ್ಲಾ ಮೈದಾನದಲ್ಲಿ ನಡೆಯುತ್ತಿರುವ ನಾಲ್ಕನೇ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಅಂಜಿಕ್ಯಾ ರಹಾನೆ ಅವರ ಶತಕದ ನೆರವಿಂದ ಭಾರತ 334 ರನ್ ಗಳನ್ನು ಪೇರಿಸಿತು. ಈ ಮೊತ್ತವನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾದ ಬ್ಯಾಟ್ಸ್ ಮನ್ ಗಳು ಎರಡಂಕ್ಕಿ ದಾಟಲು ವಿಫಲರಾಗಿದ್ದು 121 ರನ್ ಗಳಿಗೆ ಆಲೌಟ್ ಆಗಿದ್ದು, ಭಾರತ 213 ರನ್ ಗಳ ಮುನ್ನಡೆ ಸಾಧಿಸಿದೆ.
ದಕ್ಷಿಣ ಆಫ್ರಿಕಾ ಪರ ಎಲ್ಗರ್ 17, ಬಹುಮಾ 22, ಹಶೀಮ್ ಆಮ್ಲಾ 3, ಎಬಿಡಿವಿಲಿಯರ್ಸ್ 42, ಡುಪ್ಲೇಸಿಸ್ 0, ಜೆಪಿ ಡುಮಿನಿ 1, ವಿಲಾಸ್ 11, ಅಬ್ಬೋಟ್ 4, ಡೇನ್ 9, ಇಮ್ರಾನ್ ತಾಹೀರ್ 1 ರನ್ಗಳಿಗೆ ಔಟಾಗಿದ್ದಾರೆ.
ಭಾರತ ಪರ ರವೀಂದ್ರ ಜಡೇಜಾ 5 ವಿಕೆಟ್ ಗಳನ್ನು ಕಬಳಿಸಿದರೆ. ಆರ್. ಅಶ್ವಿನ್, ಉಮೇಶ್ ಯಾದವ್ ತಲಾ 2 ವಿಕೆಟ್ ಹಾಗೂ ಇಶಾಂತ್ ಶರ್ಮಾ 1 ವಿಕೆಟ್ ಪಡೆದಿದ್ದಾರೆ.
ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ಪರ ಮುರಳಿ ವಿಜಯ್ 12, ಶಿಖರ್ ಧವನ್ 33, ಪುಜಾರ 14, ವಿರಾಟ್ ಕೊಹ್ಲಿ 44, ಅಂಜಿಕ್ಯಾ ರಹಾನೆ 127, ರೋಹಿತ್ ಶರ್ಮಾ 1, ವೃದ್ಧಿಮಾನ್ ಸಹಾ 1, ರವೀಂದ್ರ ಜಡೇಜಾ 24, ಆರ್. ಅಶ್ವಿನ್ 56, ಇಶಾಂತ್ ಶರ್ಮಾ 0 ರನ್ ಗಳಿಗೆ ಔಟಾಗಿದ್ದಾರೆ.
ದಕ್ಷಿಣ ಆಫ್ರಿಕಾ ಪರ ಅಬ್ಬೋಟ್ 5, ಡೇನ್ 4 ಹಾಗೂ ಇಮ್ರಾನ್ ತಾಹೀರ್ 1 ವಿಕೆಟ್ ಪಡೆದಿದ್ದಾರೆ.