ಗಂಗೂಲಿ, ಸೆಹ್ವಾಗ್ ಮಾಕ್ರ್ಯೂ ಆಟಗಾರರು

ಮುಂದಿನ ವರ್ಷ ಆಯೋಜಿಸಲು ನಿರ್ಧರಿಸಲಾಗಿರುವ ಬಹು ನಿರೀಕ್ಷಿತ ಮಾಸ್ಟರ್ಸ್ ಚಾಂಪಿಯನ್ಸ್ ಲೀಗ್ ಟೂರ್ನಿಗೆ 12 ಮಾಕ್ರ್ಯೂ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು..
ಗಂಗೂಲಿ ಮತ್ತು ಸೆಹ್ವಾಗ್ (ಸಂಗ್ರಹ ಚಿತ್ರ)
ಗಂಗೂಲಿ ಮತ್ತು ಸೆಹ್ವಾಗ್ (ಸಂಗ್ರಹ ಚಿತ್ರ)

ದುಬೈ: ಮುಂದಿನ ವರ್ಷ ಆಯೋಜಿಸಲು ನಿರ್ಧರಿಸಲಾಗಿರುವ ಬಹು ನಿರೀಕ್ಷಿತ ಮಾಸ್ಟರ್ಸ್ ಚಾಂಪಿಯನ್ಸ್ ಲೀಗ್ ಟೂರ್ನಿಗೆ 12 ಮಾಕ್ರ್ಯೂ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು,  ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಮತ್ತು ವಿರೇಂದ್ರ ಸೆಹ್ವಾಗ್ ಕಾಣಿಸಿಕೊಂಡಿದ್ದಾರೆ.

ಟೂರ್ನಿಯಲ್ಲಿ ಒಟ್ಟು 6 ತಂಡಗಳಿದ್ದು, ಆ ಪೈಕಿ ಪ್ರತಿ ತಂಡ 2 ಮಾಕ್ರ್ಯೂ ಆಟಗಾರರನ್ನು ಒಳಗೊಂಡಿರುತ್ತದೆ. ಪಾಕಿಸ್ತಾನ ದಿಂದ 3 ಆಟಗಾರರು ಈ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಮಾಕ್ರ್ಯೂ ಆಟಗಾರರ ಪಟ್ಟಿ: ಸೌರವ್ ಗಂಗೂಲಿ, ವಿರೇಂದ್ರ ಸೆಹ್ವಾಗ್ (ಭಾರತ), ಮೈಕಲ್  ವಾಗನ್, ಗ್ರೇಮ್ ಸ್ವಾನ್ (ಇಂಗ್ಲೆಂಡ್), ಮಹೆಲಾ ಜಯವರ್ದನೆ, ಕುಮಾರ ಸಂಗಕ್ಕಾರ (ಶ್ರೀಲಂಕಾ), ಹೀತ್ ಸ್ಟ್ರೀಕ್ (ಜಿಂಬಾಬ್ವೆ), ಅಬ್ದುಲ್ ರಜಾಕ್, ಅಜರ್ ಮೊಹಮೂದ್, ಶೋಹೆಬ್ ಅಕ್ತರ್ (ಪಾಕಿಸ್ತಾನ), ಗ್ರೇಮ್ ಸ್ಮಿತ್ (ದಕ್ಷಿಣ ಆಫ್ರಿಕಾ), ಸ್ಕಾಟ್ ಸ್ಟೈರಿಸ್ (ನ್ಯೂಜಿಲೆಂಡ್).

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com