ಡೋಪಿಂಗ್ ಸುಳಿಯಲ್ಲಿ ಕುಸಲ್ ಪೆರೇರಾ

ಸರಣಿ ಹಿನ್ನೆಲೆಯಲ್ಲಿ ಹಾಲಿ ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಶ್ರೀಲಂಕಾ ತಂಡದ ವಿಕೆಟ್ ಕೀಪರ್ ಕುಸಲ್ ಪೆರೇರಾ ಅವರನ್ನು ಶ್ರೀಲಂಕಾ...
ಕುಸಲ್ ಪೆರೇರಾ
ಕುಸಲ್ ಪೆರೇರಾ
Updated on
ಕೊಲಂಬೊ: ಸರಣಿ ಹಿನ್ನೆಲೆಯಲ್ಲಿ ಹಾಲಿ ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಶ್ರೀಲಂಕಾ ತಂಡದ ವಿಕೆಟ್ ಕೀಪರ್ ಕುಸಲ್ ಪೆರೇರಾ ಅವರನ್ನು ಶ್ರೀಲಂಕಾ ಕ್ರಿಕೆಟ್ ಮಂಡಳಿ ಸ್ವದೇಶಕ್ಕೆ ಬರುವಂತೆ ಆದೇಶಿಸಿದೆ. 
ಇತ್ತೀಚೆಗೆ, ನಡೆದ ಪಾಕಿಸ್ತಾನ ವಿರುದ್ಧದ ಸರಣಿ ವೇಳೆ, ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ (ಐಸಿಸಿ) ವತಿಯಿಂದ ನಡೆಸಲಾಗಿದ್ದ ಡೋಪಿಂಗ್ ಪರೀಕ್ಷೆಯಲ್ಲಿ ಪೆರೇರಾ ನೀಡಿದ್ದ ಸ್ಯಾಂಪಲ್ ಗಳಲ್ಲಿ ನಿಷೇಧಿತ ಅಂಶಗಳು ಪತ್ತೆಯಾಗಿದ್ದವು. 
ಈ ಹಿನ್ನೆಲೆಯಲ್ಲಿ, ಐಸಿಸಿಯು ಶ್ರೀಲಂಕಾ ಕ್ರಿಕೆಟ್ ಮಂಡಳಿ (ಎಸ್‍ಎಲ್‍ಸಿ)ಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ, ಅವರನ್ನು ತವರಿಗೆ ಕರೆಸಿಕೊಳ್ಳಲಾಗಿದ್ದು, ಕುಸಲ್ ಸಿಲ್ವಾ ಅವರನ್ನು ಕಳುಹಿಸುವುದಾಗಿ ಎಸ್‍ಎಲ್‍ಸಿ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com