ಕಶ್ಯಪ್, ಶ್ರೀಕಾಂತ್ ಕುಸಿತ

ಗುರುವಾರ ಬಿಡುಗಡೆಗೊಂಡ ವಿಶ್ವ ಬ್ಯಾಡ್ಮಿಂಟನ್ ರ್ಯಾಂಕಿಂಗ್ ಪಟ್ಟಿಯಲ್ಲಿ, ಭಾರತದ ಕಿಡಾಂಬಿ ಶ್ರೀಕಾಂತ್ ಹಾಗೂ ಪರುಪಳ್ಳಿ ಕಶ್ಯಪ್ ಒಂದು ಸ್ಥಾನ ಕುಸಿತ ಕಂಡಿದ್ದು ಕ್ರಮವಾಗಿ 9ನೇ ಹಾಗೂ..
ಕೆ.ಶ್ರೀಕಾಂತ್ (ಸಂಗ್ರಹ ಚಿತ್ರ)
ಕೆ.ಶ್ರೀಕಾಂತ್ (ಸಂಗ್ರಹ ಚಿತ್ರ)

ನವದೆಹಲಿ: ಗುರುವಾರ ಬಿಡುಗಡೆಗೊಂಡ ವಿಶ್ವ ಬ್ಯಾಡ್ಮಿಂಟನ್ ರ್ಯಾಂಕಿಂಗ್ ಪಟ್ಟಿಯಲ್ಲಿ, ಭಾರತದ ಕಿಡಾಂಬಿ ಶ್ರೀಕಾಂತ್ ಹಾಗೂ ಪರುಪಳ್ಳಿ ಕಶ್ಯಪ್ ಒಂದು ಸ್ಥಾನ ಕುಸಿತ ಕಂಡಿದ್ದು ಕ್ರಮವಾಗಿ 9ನೇ ಹಾಗೂ 15ನೇ ಸ್ಥಾನಕ್ಕಿಳಿದಿದ್ದಾರೆ.

ಇತ್ತ ಎಚ್.ಎಸ್. ಪ್ರಣಯ್ 20ನೇ ಸ್ಥಾನದಲ್ಲೇ ಮುಂದುವರಿದಿದ್ದರೆ, ಅಜಯ್ ಜಯರಾಮ್ ಒಂದು ಸ್ಥಾನ ಏರಿಕೆ ಕಂಡು 22ನೇ ಶ್ರೇಯಾಂಕದಲ್ಲಿದ್ದಾರೆ. ಮಹಿಳಾ ಶಟ್ಲರ್‍ಗಳಲ್ಲಿ, ಸೈನಾ ನೆಹ್ವಾಲ್  ಹಾಗೂ ಪಿ.ವಿ. ಸಿಂಧು ಕ್ರಮವಾಗಿ 2ನೇ ಹಾಗೂ 12ನೇ ಸ್ಥಾನಗಳಲ್ಲಿ ಹಾಗೂ ಡಬಲ್ಸ್‍ನಲ್ಲಿ ಜ್ವಾಲಾ ಗುಟ್ಟಾ- ಅಶ್ವಿನಿ ಪೊನ್ನಪ್ಪ 13ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಪುರುಷರಲ್ಲಿ ಚೀನಾದ  ಚೆನ್ ಲಾಂಗ್ ಹಾಗೂ ಮಹಿಳೆಯರಲ್ಲಿ ಸ್ಪೇನ್‍ನ ಕೆರೊಲಿನಾ ಮರಿನ್ ಅಗ್ರರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com