ಸೆಹ್ವಾಗ್, ಗಂಗೂಲಿ ಕಾದಾಟಕ್ಕೆ ವೇದಿಕೆ ಸಜ್ಜು

ಭಾರತದ ಮಾಜಿ ಕ್ರಿಕೆಟಿಗರಾದ ಸೌರವ್ ಗಂಗೂಲಿ ಹಾಗೂ ವಿರೇಂದ್ರ ಸೆಹ್ವಾಗ್ ಮುಂದಿನ ವರ್ಷ ಜನವರಿ ಮಾಸಾಂತ್ಯದಲ್ಲಿ ಶುರುವಾಗಲಿರುವ ಮಾಸ್ಟರ್ಸ್ ಚಾಂಪಿಯನ್ಸ್ ಲೀಗ್ (ಎಂಸಿಎಲ್) ಪಂದ್ಯಾವಳಿಯ...
ಸೆಹ್ವಾಗ್ ಮತ್ತು ಗಂಗೂಲಿ (ಸಂಗ್ರಹ ಚಿತ್ರ)
ಸೆಹ್ವಾಗ್ ಮತ್ತು ಗಂಗೂಲಿ (ಸಂಗ್ರಹ ಚಿತ್ರ)
Updated on

ದುಬೈ: ಭಾರತದ ಮಾಜಿ ಕ್ರಿಕೆಟಿಗರಾದ ಸೌರವ್ ಗಂಗೂಲಿ ಹಾಗೂ ವಿರೇಂದ್ರ ಸೆಹ್ವಾಗ್ ಮುಂದಿನ ವರ್ಷ ಜನವರಿ ಮಾಸಾಂತ್ಯದಲ್ಲಿ ಶುರುವಾಗಲಿರುವ ಮಾಸ್ಟರ್ಸ್ ಚಾಂಪಿಯನ್ಸ್ ಲೀಗ್ (ಎಂಸಿಎಲ್) ಪಂದ್ಯಾವಳಿಯಲ್ಲಿ
ವಿರುದ್ಧ ತಂಡಗಳಲ್ಲಿದ್ದು, ಪರಸ್ಪರ ಕಾದಾಟಕ್ಕೆ ಇಳಿಯಲು ಅಣಿಯಾಗಿದ್ದಾರೆ.

ಜನವರಿ 28ರಿಂದ ಶುರುವಾಗಲಿರುವ ಈ ಪಂದ್ಯಾವಳಿಯ ವೇಳಾಪಟ್ಟಿಯನ್ನು ಸೋಮವಾರ ಪ್ರಕಟಿಸಲಾಗಿದ್ದು, ಫಬ್ರವರಿ 13ರಂದು ಫೈನಲ್ ದುಬೈ ಇಂಟರ್‍ನ್ಯಾಷನಲ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಅಂದಹಾಗೆ  ಪಂದ್ಯಾವಳಿಯು ದುಬೈ ಮತ್ತು ಶಾಂಘೈ ನಗರಗಳಲ್ಲಿ ನಡೆಯಲಿವೆ. ಫಬ್ರವರಿ 11ರಂದು ದುಬೈನಲ್ಲಿ ಸೆಮಿಫೈ ನಲ್ ನಡೆಯಲಿದ್ದರೆ, ಇದೇ ಮೈದಾನದಲ್ಲಿ ಮರುದಿನ ಎರಡನೇ ಸೆಮಿಫೈನಲ್ ಪಂದ್ಯವು ಜರುಗಲಿದೆ ಎಂದು  ಸಂಘಟಕರು ತಿಳಿಸಿದ್ದಾರೆ.

ಟೂರ್ನಿಯ ಆರಂಭಿಕ ಪಂದ್ಯವು ಲಿಬ್ರಾ ಲೆಜೆಂಡ್ಸ್ ಹಾಗೂ ಜೆಮಿನಿ ಅರೇಬಿಯನ್ಸ್ ನಡುವೆ ನಡೆಯಲಿದ್ದು, ಗಂಗೂಲಿ, ಗ್ರೇಮ್ ಸ್ವಾನ್ ಮತ್ತು ಜಾಕ್ ಕಾಲಿಸ್‍ರಂಥವರು ಸೆಹ್ವಾಗ್, ಕುಮಾರ್ ಸಂಗಕ್ಕಾರ ಮತ್ತು ಮುತ್ತಯ್ಯ  ಮುರಳೀಧರನ್ ವಿರುದ್ಧ ಸೆಣಸಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com