

ನವದೆಹಲಿ: ವಿವಾದಿತ ಡಿಸಿಷನ್ ರಿವ್ಯೂ ಸಿಸ್ಟಂ(ಡಿಆರ್‍ಎಸ್)ನಲ್ಲಿ ಉಪಯೋಗಿಸುವ ಸಾಧನಗಳ ಗುಣಮಟ್ಟವನ್ನು ಅವಲೋಕಿಸಿ, ಲೋಪದೋಷಗಳಿದ್ದರೆ ಅದರ ಬಗ್ಗೆ ಮಾಹಿತಿ ನೀಡುವ ವಿಶೇಷ ಪರಿಕರವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಮಾಜಿ ಕ್ರಿಕೆಟಿಗ ಹಾಗೂ ಐಸಿಸಿ ತಾಂತ್ರಿಕ ಸಮಿತಿ ಅಧ್ಯಕ್ಷ ಅನಿಲ್ ಕುಂಬ್ಳೆ ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಕುಂಬ್ಳೆ, 'ಡಿಆರ್‍ಎಸ್ ನಲ್ಲಿ ಉಪಯೋಗಿಸಲಾಗುವ ಬಾಲ್ ಟ್ರಾಕರ್‍ನಂತಹ ಉಪಕರಣಗಳು ಸಮರ್ಥವಾಗಿ ಕಾರ್ಯಾಚರಣೆ ನಡೆಸಲು ಹೊಸ ತಂತ್ರಜ್ಞಾನ
ಸಹಾಯಕವಾಗುತ್ತದೆ. ಮ್ಯಾಸಾಚ್ಯುಸೆಡಟ್ಸ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ)ಯ ಎಂಜಿನಿಯರ್ ಗಳು ಇದನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಇದರಿಂದ ಡಿಆರ್ಎಸ್ ಮೂಲಕ ಯಾವುದೇ ಲೋಪದೋಷಗಳಿಲ್ಲದ ನಿರ್ಧಾರವನ್ನು ಕೈಗೊಳ್ಳಬಹುದು ಎಂದು ಹೇಳಿದ್ದಾರೆ.