ವಿದರ್ಭ ಸೇರಿದ ಜಾಫರ್

ರಣಜಿಯಲ್ಲಿ ಗರಿಷ್ಠ ರನ್ ಪೇರಿಸಿದ ಹಿರಿಮೆಗಳಿಸಿರುವ ಮುಂಬೈ ತಂಡದ ಮಾಜಿ ನಾಯಕ ವಾಸೀಂ ಜಾಫರ್ ಅವರು, ವಿದರ್ಭ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆಂದು ಹೇಳಲಾಗುತ್ತಿದೆ.
ವಸೀಂ ಜಾಫರ್
ವಸೀಂ ಜಾಫರ್

ಮುಂಬೈ: ರಣಜಿಯಲ್ಲಿ ಗರಿಷ್ಠ ರನ್ ಪೇರಿಸಿದ ಹಿರಿಮೆಗಳಿಸಿರುವ ಮುಂಬೈ ತಂಡದ ಮಾಜಿ ನಾಯಕ ವಾಸೀಂ ಜಾಫರ್ ಅವರು, ವಿದರ್ಭ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆಂದು  ಹೇಳಲಾಗುತ್ತಿದೆ.

ಜಾಫರ್ ಅವರ ಸೇರ್ಪಡೆಯನ್ನು ಅಧಿಕೃತವಾಗಿ ಘೋಷಿಸಿರುವ ವಿದರ್ಭ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಪ್ರಕಾಶ್ ದೀಕ್ಷಿತ್, `ವಾಸೀಂರವರ ಅನುಭವ ಹಾಗೂ ಅವರಲ್ಲಿನ ಕ್ರಿಕೆಟ್ ಜ್ಞಾನದಿಂದ  ವಿದರ್ಭ ತಂಡಕ್ಕೆ ಸಾಕಷ್ಟು ಪ್ರಯೋಜನವಾಗಲಿದೆ' ಎಂಬ ಆಶಾಭಾವನೆ ವ್ಯಕ್ತಪಡಿಸಿದ್ದಾರೆ. ಸದ್ಯಕ್ಕೆ ವಿದೇಶ ಪ್ರವಾಸದಲ್ಲಿರುವ ವಾಸೀಂ ಜಾಫರ್ ಅವರು, ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಭಾರತಕ್ಕೆ ವಾಪಸ್ಸಾದ ನಂತರ ಈ ಬಗ್ಗೆ ಅಭಿಪ್ರಾಯ ತಿಳಿಸುವುದಾಗಿ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com